` ದಿಯಾ ಕ್ಲೈಮಾಕ್ಸ್ ಚೇಂಜ್ : ರೀ ರಿಲೀಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
Dia Re Released With Changed Climax
Dia Movie Image

ಲಾಕ್ ಡೌನ್ ಶುರುವಾಗುವ ಮುನ್ನ ರಿಲೀಸ್ ಆಗಿದ್ದ ಸಿನಿಮಾ ದಿಯಾ. ದಿಯಾ ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ ಸಿಕ್ಕರೂ, ಪ್ರೇಕ್ಷಕ ಥಿಯೇಟರಿಗೆ ಬರುವ ವೇಳೆಗೆ ಥಿಯೇಟರ್ ಬಾಗಿಲು ಮುಚ್ಚಿತ್ತು. ಸಿನಿಮಾ ನೋಡಿದ ಪ್ರೇಕ್ಷಕರೆಲ್ಲ ಸಿನಿಮಾ ತುಂಬಾ ಚೆನ್ನಾಗಿದೆ. ಆದರೆ.. ಚಿತ್ರದಲ್ಲಿ ನಿರಾಸೆ, ದುಃಖವೇ ಹೆಚ್ಚಿದೆ ಎಂದಿದ್ದರು. ಪ್ರೇಕ್ಷಕರ ಅಭಿಪ್ರಾಯಕ್ಕೆ ಶರಣು ಎಂದ ಸಿನಿಮಾ ತಂಡ ಈಗ ಚಿತ್ರವನ್ನು ಹೊಸದಾಗಿ ರಿಲೀಸ್ ಮಾಡುತ್ತಿದೆ.

ಚಿತ್ರದ ಕ್ಲೈಮಾಕ್ಸ್ ಚೇಂಜ್ ಮಾಡಲಾಗಿದೆಯಂತೆ. ಅದರಲ್ಲಿರೋ ಟ್ವಿಸ್ಟ್ ಏನು ಅನ್ನೋ ಸಸ್ಪೆನ್ಸ್‍ನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಒಟ್ಟಿನಲ್ಲಿ ಮುಂದಿನ ವಾರ ದಿಯಾ ಹೊಸ ಸಿನಿಮಾ ರೂಪದಲ್ಲಿ ತೆರೆಗೆ ಬರುತ್ತಿದೆ.

ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ ನಟಿಸಿದ್ದ ಸಿನಿಮಾದಲ್ಲಿ ಖುಷಿ ರವಿ ನಟಿಸಿದ್ದ ದಿಯಾ ಪಾತ್ರ ಎಲ್ಲರ ಮೆಚ್ಚುಗೆ ಗಳಿಸಿತ್ತು. ನಿರ್ದೇಶಕ ಅಶೋಕ್ ಅವರಿಗೆ ಪ್ರೇಕ್ಷಕರು ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದರು. ಫೆಬ್ರವರಿ 7ರಂದು ರಿಲೀಸ್ ಆಗಿದ್ದ ಸಿನಿಮಾವನ್ನು ಬದಲಾಯಿಸಿ ಅಕ್ಟೋಬರ್ 23ರಂದು ಮತ್ತೆ ತೆರೆಗೆ ತರುತ್ತಿದ್ದಾರೆ ನಿರ್ಮಾಪಕ ಕೃಷ್ಣ ಚೈತನ್ಯ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery