7 ತಿಂಗಳ ನಂತರ ಸಿನಿಮಾ ಮಂದಿರಗಳು ಬಾಗಿಲು ತೆರೆಯುತ್ತಿವೆ. ಮಾರ್ಚ್ 2ನೇ ವಾರ ಬಾಗಿಲು ಮುಚ್ಚಿದ್ದ ಚಿತ್ರಮಂದಿಗಳು 5ನೇ ಅನ್ ಲಾಕ್‍ನಲ್ಲಿ ಓಪನ್ ಆಗುತ್ತಿವೆ. ಯುಎಫ್‍ಓ & ಕ್ಯೂಬ್ ಸಂಸ್ಥೆಗಳು ಸಿನಿಮಾ ಪ್ರಸಾರ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಿದ್ದು, ಡಿಸೆಂಬರ್‍ವರೆಗೆ ಹೊಸ ಚಿತ್ರಗಳಿಗೆ ಈ ವಿನಾಯಿತಿ ಸೌಲಭ್ಯ ಸಿಗಲಿದೆ. ಇನ್ನಷ್ಟು ಕಡಿಮೆ ಮಾಡಿ ಎನ್ನುವುದು ನಿರ್ಮಾಪಕರ ವಲಯದ ಬೇಡಿಕೆ.
ಸದ್ಯಕ್ಕೆ ಹೊಸ ಸಿನಿಮಾಗಳು ಥಿಯೇಟರಿಗೆ ಬರುತ್ತಿಲ್ಲ. ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ, ಲವ್ ಮಾಕ್‍ಟೇಲ್, ದಿಯಾ, ಕಾಣದಂತೆ ಮಾಯವಾದನು, ಶಿವಾಜಿ ಸುರತ್ಕಲ್, 5 ಅಡಿ 7 ಅಂಗುಲ.. ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಮಲ್ಟಿಪ್ಲೆಕ್ಸ್‍ಗಳು ಪೂರ್ಣ ಪ್ರಮಾಣದಲ್ಲಿ ತೆರೆದಿದ್ದರೆ, ಸಿಂಗಲ್ ಸ್ಕ್ರೀನ್ ಥಿಯೇಟರುಗಳು ಸಂಪೂರ್ಣವಾಗಿ ಬಾಗಿಲು ತೆರೆಯುತ್ತಿಲ್ಲ.
ಕೋವಿಡ್ ಲಾಕ್ ಡೌನ್ ಕಾರಣದಿಂದಾಗಿ ಮನೆಯಲ್ಲಿದ್ದ ಪ್ರೇಕ್ಷಕರನ್ನು ಸೆಳೆಯಲು ಚಿತ್ರಮಂದಿರಗಳ ಟಿಕೆಟ್ ದರವನ್ನೂ ಇಳಿಸಲಾಗಿದೆ. ಸಿಂಗಲ್ ಸ್ಕ್ರೀನ್ ಟಾಕೀಸುಗಳಲ್ಲಿ ಟಿಕೆಟ್ ದರ 40 ರೂ. ಹಾಗೂ 50 ರೂ. ಇದ್ದರೆ, ಮಲ್ಟಿಪ್ಲೆಕ್ಸುಗಳಲ್ಲಿ 99 ರೂ.ಗಳಿಂದ 149 ರೂ.ಗಳವೆರೆಗೆ ಟಿಕೆಟ್ ದರ ನಿಗದಿಪಡಿಸಲಾಗಿದೆ.