ಕೆಜಿಎಫ್ ಚಾಪ್ಟರ್ 2 ಚಿತ್ರದ ಇನ್ನೊಂದು ಬ್ರೇಕ್ ಕೊನೆಯಾಗುತ್ತಿದೆ. ಇಂದಿನಿಂದ ಅಂದ್ರೆ ಗುರುವಾರದಿಂದ ಕೆಜಿಎಫ್ ಅಖಾಡಕ್ಕೆ ರಾಕಿಭಾಯ್ ಮತ್ತು ಅಧೀರ ಇಬ್ಬರೂ ಎಂಟ್ರಿ ಕೊಡುತ್ತಿದ್ದಾರೆ. ಇದು ಚಾಪ್ಟರ್ 2ನ ಕೊನೆಯ ಹಂತದ ಚಿತ್ರೀಕರಣ. ಇದಾದ ಬಳಿಕ ಕಂಪ್ಲೀಟ್ ಪೋಸ್ಟ್ ಪ್ರೊಡಕ್ಷನ್‍ಗೆ ಹೋಗಲಿದೆ ಕೆಜಿಎಫ್ ಚಾಪ್ಟರ್ 2.
ಈ ತಿಂಗಳ ಅಂತ್ಯಕ್ಕೆ ಚಿತ್ರೀಕರಣ ಮುಗಿಸಿ ನಾವು ಚಿತ್ರದ ಬಿಡುಗಡೆಯತ್ತ ಸಾಗಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ನಿರ್ಮಾಪಕರಲ್ಲೊಬ್ಬರಾದ ಹೊಂಬಾಳೆ ಫಿಲಂಸ್‍ನ ಕಾರ್ತಿಕ್ ಗೌಡ.
2019ರಲ್ಲಿ ಇಂಡಿಯಾ ಲೆವೆಲ್ಲಿಗೆ ಹಿಟ್ ಆಗಿದ್ದ ಕೆಜಿಎಫ್ ಚಾಪ್ಟರ್ 1ನ ಮುಂದುವರಿದ ಭಾಗವೇ ಕೆಜಿಎಫ್ ಚಾಪ್ಟರ್ 2. ಕೊರೊನಾ ಕಾಟ ಇಲ್ಲದೇ ಹೋಗಿದ್ದರೆ ಇದೇ ಅಕ್ಟೋಬರ್‍ನಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾ. ಯಶ್, ಪ್ರಶಾಂತ್ ನೀಲ್, ವಿಜಯ್ ಕಿರಗಂದೂರು ಅವರನ್ನು ನ್ಯಾಷನಲ್ ಲೆವೆಲ್ಲಿನಲ್ಲಿ ಗುರುತಿಸುವಂತೆ ಮಾಡಿದ್ದ ಸಿನಿಮಾ ಇದು. ಹೀಗಾಗಿಯೇ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಇಡೀ ಭಾರತೀಯ ಚಿತ್ರರಂಗ ಕುತೂಹಲದಿಂದ ಎದುರು ನೋಡುತ್ತಿದೆ.