7 ತಿಂಗಳ ನಂತರ ಥಿಯೇಟರ್ ಬಾಗಿಲು ತೆರೆಯೋಕೆ, ಸಿನಿಮಾ ಪ್ರದರ್ಶನಕ್ಕೆ ಅವಕಾಶವೇನೋ ಸಿಕ್ಕಿದೆ. ಕೊರೊನಾ ರೂಲ್ಸ್ ಪಾಲಿಸಿ, ಸಿನಿಮಾ ಶೋ ಮಾಡಿ ಎಂದಿದೆ ಸರ್ಕಾರ. 7 ತಿಂಗಳಿಂದ ಸಿನಿಮಾಗಳಿಲ್ಲದ ಪ್ರೇಕ್ಷಕರು, ಚಿತ್ರಮಂದಿರಕ್ಕೆ ಬರುತ್ತಾರಾ..? ಬರಲಿ ಅನ್ನೋ ಆಸೆ ಪ್ರತಿಯೊಬ್ಬ ಚಿತ್ರೋದ್ಯಮಿಗೂ ಇರುತ್ತೆ. ಆದರೆ ಸ್ಯಾಂಡಲ್‍ವುಡ್ ಸ್ಟಾರ್ ಶಿವಣ್ಣ ಹೇಳೋದೇ ಬೇರೆ.
`ನಿಮ್ಮ ಸುರಕ್ಷತೆಯನ್ನು ಮರೆತು ಸಿನಿಮಾ ನೋಡೋಕೆ ಬನ್ನಿ ಎಂದು ನಾನು ಹೇಳಲಾರೆ. ಸಿನಿಮಾ ನೋಡೋಕೆ ಬರೋದು, ಬಿಡುವುದು ನಿಮ್ಮ ಇಷ್ಟ. ನಿಮ್ಮ ಸುರಕ್ಷತೆಯೇ ಮೊದಲ ಆದ್ಯತೆಯಾಗಿರಲಿ. ಒತ್ತಾಯ ಮಾಡಲಾರೆ' ಎಂದಿದ್ದಾರೆ ಶಿವರಾಜ್ ಕುಮಾರ್.
ಸಿನಿಮಾಗಳ ಬಿಡುಗಡೆ, ಪ್ರೇಕ್ಷಕರ ಸುರಕ್ಷತೆ ಕುರಿತು ಚಿತ್ರ ನಿರ್ಮಾಪಕರು ಮತ್ತು ಪ್ರದರ್ಶಕರು ಸೂಕ್ತ ಕ್ರಮ ವಹಿಸಕೊಳ್ಳಬೇಕು. ಪ್ರೇಕ್ಷಕರಿಗೆ ಧೈರ್ಯ ಮತ್ತು ಭರವಸೆ ತುಂಬುವ ಜವಾಬ್ದಾರಿ ಚಿತ್ರಮಂದಿರಗಳ ಮಾಲೀಕರದ್ದು ಎನ್ನುವುದು ಶಿವಣ್ಣ ಮಾತು.