ಕೊರೊನಾ ಸಂಕಷ್ಟ, ಲಾಕ್ ಡೌನ್ ಮುಗಿದು ಥಿಯೇಟರ್ ಓಪನ್ ಮಾಡೋಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ರಿಲೀಸ್ ಆಗುವ ಮೊದಲ ಸಿನಿಮಾ ಯಾವುದು..? ಈ ಪ್ರಶ್ನೆಗೆ ಉತ್ತರ ರಣಂ ಆಗಬಹುದಾ..?
ಕಾರಣ ಇಷ್ಟೆ, 7 ತಿಂಗಳ ನಂತರ ದಿನ ಪತ್ರಿಕೆಗಳಲ್ಲಿ ಸಿನಿಮಾ ಜಾಹೀರಾತು ಕಾಣಿಸಿದೆ. ರಣಂ ಚಿತ್ರದ್ದು. ಅದೂ ಥಿಯೇಟರುಗಳ ಹೆಸರಿನ ಸಮೇತ. ಹೀಗಾಗಿ ಥಿಯೇಟರ್ ಓಪನ್ ಆಗುತ್ತಿದ್ದಂತೆ ರಣಂ ಮೊದಲ ರಿಲೀಸ್ ಆದರೂ ಆಶ್ಚರ್ಯವಿಲ್ಲ.
ವಿಚಿತ್ರವೆಂದರೆ ಇದು ಚಿರಂಜೀವಿ ಸರ್ಜಾ ಸಿನಿಮಾ. ಲಾಕ್ ಡೌನ್ ಶುರುವಾದಾಗ ಥಿಯೇಟರಿನಲ್ಲಿದ್ದ ಕೊನೆಯ ಚಿತ್ರವೂ ಅವರದ್ದೇ. ಶಿವಾರ್ಜುನ. ರಣಂ ರಿಲೀಸ್ ಆದರೆ.. ಲಾಕ್ ಡೌನ್ ಮುಗಿದ ನಂತರ ಮೊದಲ ಚಿತ್ರವೂ ಅವರದ್ದೇ ಆಗಲಿದೆ. ನೋವಿನ ಸಂಗತಿಯೆಂದರೆ ಲಾಕ್ ಡೌನ್ ಶುರುವಾದಾಗ ನಮ್ಮೊಂದಿಗಿದ್ದ ಅವರು ಈಗ ಇಲ್ಲ.