` ಅಕ್ಟೋಬರ್ 15ರಿಂದ ಚಿತ್ರಮಂದಿರ ಓಪನ್. ಆದರೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Theaters Ready To ReOpen Post 7 Months
Theaters Ready To Re Open Post 7 Months

ಬರೋಬ್ಬರಿ 7 ತಿಂಗಳಿಂದ ಬಂದ್ ಆಗಿದ್ದ ಚಿತ್ರಮಂದಿರಗಳ ಬಾಗಿಲು ತೆರೆಯೋಕೆ ಅನುಮತಿ ಸಿಕ್ಕಿದೆ. ಕೋವಿಡ್ 19 ರೂಲ್ಸ್‍ಗಳಿಂದ ಸ್ವಲ್ಪ ಸಡಿಲಿಕೆ ನೀಡಿರುವ ಕೇಂದ್ರ ಸರ್ಕಾರ ಅಕ್ಟೋಬರ್ 15ರಿಂದ ಚಿತ್ರಮಂದಿರಗಳಿಗೆ ಪ್ರದರ್ಶನ ಆರಂಭಿಸಲು ಅನುಮತಿ ನೀಡಿದೆ. ಆದರೆ.. ಷರತ್ತುಗಳನ್ನು ವಿಧಿಸಿದೆ.

ಚಿತ್ರಮಂದಿರಗಳು ಓಪನ್ ಆದರೂ, ಸಂಪೂರ್ಣ ಪ್ರದರ್ಶನ ನಡೆಸಲು ಅವಕಾಶವಿಲ್ಲ. ಚಿತ್ರಮಂದಿರಗಳ ಒಟ್ಟಾರೆ ಸಾಮಥ್ರ್ಯದ ಅರ್ಧದಷ್ಟು ಪ್ರೇಕ್ಷಕರಿಗೆ ಮಾತ್ರವೇ ಪ್ರವೇಶ ನೀಡಬೇಕು. ಉದಾಹರಣೆಗೆ ಟಾಕೀಸ್‍ನ ಸೀಟುಗಳ ಸಂಖ್ಯೆ 100 ಇದ್ದರೆ, 50 ಪ್ರೇಕ್ಷಕರಿಗೆ ಮಾತ್ರವೇ ಟಿಕೆಟ್ ವಿತರಿಸಲು ಅವಕಾಶ.

ಇನ್ನು ಚಿತ್ರಮಂದಿರಗಳನ್ನು ಕಡ್ಡಾಯವಾಗಿ ಸ್ಯಾನಿಟೈಸ್ ಮಾಡಬೇಕು. ಮಾಸ್ಕ್ ಸೇರಿದಂತೆ ಉಳಿದ ಕೊರೊನಾ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಮಾರ್ಚ್ 14ರಿಂದ ದೇಶದಾದ್ಯಂತ ಚಿತ್ರಮಂದಿರಗಳು ಬಂದ್ ಆಗಿದ್ದವು. ಅಕ್ಟೋಬರ್ 15ರಿಂದ ರೀ-ಓಪನ್ ಆಗುತ್ತಿವೆ. ಅಲ್ಲಿಗೆ ಸರಿಯಾಗಿ 7 ತಿಂಗಳ ನಂತರ ಚಿತ್ರಮಂದಿರಗಳ ಬಾಗಿಲು ತೆರೆಯುತ್ತಿದೆ.