Print 
petromax aditi prahudeva,

User Rating: 0 / 5

Star inactiveStar inactiveStar inactiveStar inactiveStar inactive
 
Aditi Not In 'Petromax'
Aditi Prabhudeva

ಪೆಟ್ರೋಮ್ಯಾಕ್ಸ್, ನೀರ್‍ದೋಸೆ, ಸಿದ್ಲಿಂಗು ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ಹೊಸ ಸಿನಿಮಾ. ಈ ಸಿನಿಮಾಗೆ ಮುಹೂರ್ತವೂ ಆಗಿ ಹೋಗಿತ್ತು. ಆದರೆ ಈಗ ಕಥೆಯನ್ನೇ ಬದಲಿಸಿಕೊಂಡು ಬಂದಿದ್ದಾರೆ ವಿಜಯ್ ಪ್ರಸಾದ್. ಈ ಬಾರಿ ನೀನಾಸಂ ಸತೀಶ್, ಪೆಟ್ರೋಮ್ಯಾಕ್ಸ್ ಹೀರೋ. ಹೀರೋಯಿನ್ ಆಗಿ ಆದಿತಿ ಪ್ರಭುದೇವ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಬ್ರಹ್ಮಚಾರಿ ಚಿತ್ರದ ಗುಂಗಿನಲ್ಲೇ ಮತ್ತೊಂದು ರೊಮ್ಯಾಂಟಿಕ್ ಕನಸಿನಲ್ಲಿದ್ದ ಅಭಿಮಾನಿಗಳಿಗೆ ಈಗ ಶಾಕಿಂಗ್ ನ್ಯೂಸ್.

ಆದರೆ ಈಗ ನಾಯಕಿಯ ಬದಲಾವಣೆ ಆಗುತ್ತಿದೆ.

ಆದಿತಿ ಪ್ರಭುದೇವ ಅವರೇ ನಟಿಸಬೇಕಿತ್ತು. ಆದರೆ,  ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ. ಹೀಗಾಗಿ ನಾಯಕಿ ಬದಲಾವಣೆ ಯೋಚನೆಯಲ್ಲಿದ್ದೇವೆ. ಹುಡುಕಾಟ ನಡೆದಿದೆ ಎಂದಿದ್ದಾರೆ ವಿಜಯ್ ಪ್ರಸಾದ್.

ಅಂದಹಾಗೆ 2013ರಲ್ಲಿ ಪೆಟ್ರೋಮ್ಯಾಕ್ಸ್ ಅನ್ನೋ ಚಿತ್ರಕ್ಕೆ ಮುಹೂರ್ತ ಮಾಡಿದ್ದರು ವಿಜಯ ಪ್ರಸಾದ್. ಆಗಲೂ ಸತೀಶ್ ಅವರೇ ಹೀರೋ. ಆದರೆ ಈಗ ಕಥೆ ಬದಲಾಗಿದೆ. ನಾಲ್ವರು ಅನಾಥ ಹುಡುಗರು ಅನಾಥಾಶ್ರಮದಿಂದ ಹೊರ ಬಂದ ಮೇಲೆ ಹೇಗೆ ಬದುಕು ಕಟ್ಟಿಕೊಳ್ತಾರೆ ಅನ್ನೋದು ಚಿತ್ರದ ಕಥೆಯಂತೆ.

ಸತೀಶ್ ಜೊತೆಗೆ ಬೊಂಬೆಗಳ ಲವ್ ಖ್ಯಾತಿಯ ಅರುಣ್, ನಾಗಭೂಷಣ್, ಹೇಮಾದತ್ ನಟಿಸುತ್ತಿದ್ದು, ಪೆಟ್ರೋಮ್ಯಾಕ್ಸ್ ಪಿಕ್ಚರ್ ಹೌಸ್, ಸತೀಶ್ ಪಿಕ್ಚರ್ ಹೌಸ್ ಮತ್ತು ಸ್ಟುಡಿಯೋ ಸೇರಿ ಒಟ್ಟು 18 ಸಂಸ್ಥೆಗಳು ಚಿತ್ರವನ್ನು ಸಾಮೂಹಿಕವಾಗಿ ನಿರ್ಮಿಸುತ್ತಿವೆ. ಯಾರಿಗೂ ಸಂಭಾವನೆ ಇಲ್ಲ. ಚಿತ್ರದಿಂದ ಬಂದ ಲಾಭದಲ್ಲಿ ಪಾಲು ಹಂಚಿಕೆಯಾಗಲಿದೆ.