` `90 ಹೊಡಿ ಮನೇಗ್ ನಡಿ'ಗೆ ಬಿರಾದಾರ್ ಹೀರೋ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
Vijanath Biradar Turns Hero Once Again
Vijayanth Biradar In 90 Hoded Manege Nadi

ಕನ್ನಡ ಚಿತ್ರರಂಗದಲ್ಲಿ ಕುಡುಕ ಮತ್ತು ಭಿಕ್ಷುಕ ಪಾತ್ರಗಳಿಂದಲೇ ಜನಪ್ರಿಯವಾದ ಕಲಾವಿದ ವೈಜನಾಥ್ ಬಿರಾದಾರ್. ಬಿರಾದಾರ್‍ಗೆ ಹೊಸ ಬೆಳಕು ಕೊಟ್ಟಿದ್ದು ಗಿರೀಶ್ ಕಾಸರವಳ್ಳಿಯವರ ಕನಸೆಂಬೋ ಕುದುರೆಯನೇರಿ.. ಆ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ ಬಿರಾದಾರ್, ಈಗ ಮತ್ತೊಮ್ಮೆ ಹೀರೋ ಆಗುತ್ತಿದ್ದಾರೆ. ಚಿತ್ರದ ಟೈಟಲ್ `90 ಹೊಡಿ ಮನೇಗ್ ನಡಿ'.

ಕುಡುಕನ ಪಾತ್ರದಿಂದಲೇ ಫೇಮಸ್ ಆಗಿರುವ ಬಿರಾದಾರ್, ಈ ಚಿತ್ರದಲ್ಲಿ ಕುಡಿತದಿಂದಾಗುವ ದುಷ್ಟ್ಪರಿಣಾಮಗಳ ಕಥೆ ಹೇಳಲಿದ್ದಾರೆ. ಈ ಚಿತ್ರಕ್ಕೆ ದಿ.ನಿರ್ದೇಶಕ ಅಶೋಕ್ ಬಾದರದಿನ್ನಿ ಸಹೋದರ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ನಿರ್ದೇಶಕರು. ಬಿರಾದಾರ್ ಜೊತೆಗೆ ಧರ್ಮ, ಕರಿಸುಬ್ಬು, ನೀತೂ, ಪೂಜಾ, ಪ್ರಶಾಂತ್ ಸಿದ್ದಿ ನಟಿಸುತ್ತಿದ್ದಾರೆ

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery