` ಎಸ್‍ಪಿಬಿ ಸಮಾಧಿ ಮೇಲೆ ಅವರೇ ಹೇಳಿದ ಆ ಮಾತು ಇರುತ್ತಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಎಸ್‍ಪಿಬಿ ಸಮಾಧಿ ಮೇಲೆ ಅವರೇ ಹೇಳಿದ ಆ ಮಾತು ಇರುತ್ತಾ..?
SP Balasubramanyam

ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರದ್ದು ದೈವದತ್ತ ಪ್ರತಿಭೆ. ಬೇರೆಯ ಶಾಸ್ತ್ರೀಯ ಸಂಗೀತಗಾರರಿಗೆ ಹೋಲಿಸಿದರೆ ಅಭ್ಯಾಸವೂ ಕಡಿಮೆ. ಹಾಗಂತ ಸಿನಿಮಾ ಹಾಡು ಹಾಡುವುದೆಂದರೆ ಸುಲಭದ ಮಾತೇನಲ್ಲ. ಪ್ರಯತ್ನವನ್ನಂತೂ ನಿರಂತರವಾಗಿ ಮಾಡುತ್ತಿದ್ದ ಎಸ್‍ಪಿಬಿ ಅವರಿಗೆ ಬಾಲಮುರಳೀ ಕೃಷ್ಣ ಎಂದರೆ ಅಚ್ಚುಮೆಚ್ಚು. ಬಾಲಮುರಳೀಕೃಷ್ಣ ಎಂದರೆ ಯಾರು ಗೊತ್ತಲ್ಲ.. ಮುತ್ತಿನ ಹಾರ ಚಿತ್ರದಲ್ಲಿ ದೇವರು ಹೊಸೆದ ಪ್ರೇಮದ ದಾರ.. ಹಾಡು ಹಾಡಿದವರು. ಸಂಗೀತ ಲೋಕದ ಈ ಮಹಾನ್ ಪ್ರತಿಭೆಯನ್ನು ದೇವರೆಂದೇ ಭಾವಿಸಿದ್ದರು ಎಸ್‍ಪಿಬಿ.

ಅವರೊಬ್ಬ ಕಮಲದ ಮೇಲೆ ಕೂರದ ಸರಸ್ವತಿ, ಭೂಮಿಗೆ ಬಂದ ದೇವರು, ಗಾನಋಷಿ ಎನ್ನುತ್ತಿದ್ದ ಎಸ್‍ಪಿಬಿ ಕಾರ್ಯಕ್ರಮವೊಂದಕ್ಕೆ ಬಾಲಮುರಳೀಕೃಷ್ಣ ಅವರು ಅತಿಥಿಯಾಗಿ ಬಂದಿದ್ದರು. ಆ ಕಾರ್ಯಕ್ರಮದಲ್ಲಿ ಬಾಲಮುರಳಿಕೃಷ್ಣ ಒಂದು ಮಾತು ಹೇಳಿದ್ದರು.

`ಬಾಲು ಸ್ವಲ್ಪ ಪ್ರಯತ್ನಪಟ್ಟರೆ ಸಾಕು, ನನ್ನ ಹಾಗೆ ಹಾಡಿಬಿಡುತ್ತಾನೆ. ನನ್ನನ್ನೂ ಮೀರಿಸಿ ಹಾಡುತ್ತಾನೆ. ಆದರೆ, ನಾನೆಷ್ಟೇ ಪ್ರಯತ್ನ ಪಟ್ಟರೂ ಬಾಲು ಅವರಂತೆ ಹಾಡಲು ಸಾಧ್ಯವಿಲ್ಲ' ಎಂದಿದ್ದರು.

ಈ ಹೊಗಳಿಕೆಗೆ ಎಂದಿನಂತೆ ನಾಚಿ ಹೋಗಿದ್ದ ಎಸ್‍ಪಿಬಿ, ಆಮೇಲೆ ಭಾವುಕರಾಗಿದ್ದರು. ಬಾಲಮುರಳಿಕೃಷ್ಣ ಎಂಬ ದೇವರಿಂದ ಆಶೀರ್ವಾದ ಪಡೆದವನು ಎಂದು ನನ್ನ ಸಮಾಧಿಯ ಮೇಲೆ ಬರೆಯಬೇಕು. ಇದು ಈತನ ಜೀವಮಾನದ ಸಾಧನೆ ಎಂದು ಸಮಾಧಿಯ ಮೇಲೆ ಇರಬೇಕು. ಹಾಗೆಂದೇ ಬರೆಯಿರಿ ಎಂದಿದ್ದರು ಎಸ್‍ಪಿಬಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery