` ವಿಷ್ಣು ಕೊನೆಯ ಹಾಡಿನಲ್ಲಿತ್ತು ಎಸ್‍ಪಿಬಿಯವರ ಆ ಕನಸು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
spb's last dream was
SP Balasumbramanyam

ಚಾಮುಂಡಿ ತಾಯಿಯಾಣೆ ನಾನೆಂದು ನಿಮ್ಮೋನೇ.. ಮುಂದಿನ ಜನ್ಮದಲ್ಲಿ ಹುಟ್ಟೋದು ಇಲ್ಲೇನೇ..

ಆಪ್ತರಕ್ಷಕ ಚಿತ್ರದ ಈ ಹಾಡು ಕೇಳಿದರೆ ವಿಷ್ಣು ಅಭಿಮಾನಿಗಳು ಈ ಕ್ಷಣಕ್ಕೂ ಭಾವುಕರಾಗ್ತಾರೆ. ವಿಷ್ಣು ವೃತ್ತಿಜೀವನದ ಮೊದಲ ಮತ್ತು ಕೊನೆಯ ಹಾಡು, ಎರಡನ್ನೂ ಹಾಡಿದ್ದವರು ಎಸ್‍ಪಿಬಿ. ನಾಗರಹಾವು ಚಿತ್ರದ ಹಾವಿನ ದ್ವೇಷ.. ಹಾಡಿನಿಂದ ಶುರುವಾದ ಬಾಂಧವ್ಯ, ಆಪ್ತರಕ್ಷಕದವರೆಗೂ ನಿರಂತರವಾಗಿತ್ತು.

ವಿಷ್ಣು, ಅಂಬಿ, ದ್ವಾರಕೀಶ್ ಜೊತೆ ಬಾಲು ಸೇರಿಕೊಂಡರೆ ಸಂಭ್ರಮಕ್ಕೆ ಮಿತಿಯೇ ಇರುತ್ತಿರಲಿಲ್ಲ. ವಿಷ್ಣುಗೂ ರಫಿ ಇಷ್ಟ, ಎಸ್‍ಪಿಬಿಗೆ ಪ್ರಾಣ. ಬಾಲು ರಫಿ ಹಾಡುಗಳನ್ನು ಹಾಡ್ತಾ ಇದ್ದರೆ, ವಿಷ್ಣು ಡ್ಯಾನ್ಸ್ ಮಾಡುತ್ತಿದ್ದರಂತೆ. ಅಷ್ಟೇ ಏಕೆ.. ವಿಷ್ಣು, ಎಸ್‍ಪಿಬಿ ಧ್ವನಿಯನ್ನು ಮಿಮಿಕ್ರಿ ಮಾಡಿ ಹಾಡುತ್ತಿದ್ದರಂತೆ. ಆ ಪ್ರೀತಿ ಅವರ ಕೊನೆಯ ಹಾಡಿನಲ್ಲೂ ಇತ್ತು.

ಆಪ್ತರಕ್ಷಕ ಚಿತ್ರದ ಆ ಹಾಡಿನಲ್ಲಿ ಮುಂದಿನ ಜನ್ಮದಲ್ಲಿ ಹುಟ್ಟೋದು ಇಲ್ಲೇನೇ.. ಹಾಡಿದೆಯಲ್ಲ. ಅದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು ಎಸ್‍ಪಿಬಿ. ನನಗೆ ಇನ್ನೊಂದು ಜನ್ಮ ಅಂತಾ ಇರೋದೇ ಆದರೆ, ನಾನು ಕನ್ನಡಿಗನಾಗಿ ಹುಟ್ಟುತ್ತೇನೆ ಎಂದಿದ್ದರು ಎಸ್‍ಪಿಬಿ.

ನಾನು ತೆಲುಗಿನವನು. ಎಲ್ಲ ಭಾಷೆಗಳಲ್ಲೂ ಹಾಡಿದ್ದೇನೆ. ಆದರೆ, ಕನ್ನಡಿಗರು ನನ್ನನ್ನು ಪ್ರೀತಿಸಿದಷ್ಟು ಬೇರೆ ಯಾವ ಭಾಷಿಕರೂ ನನ್ನನ್ನು ಪ್ರೀತಿಸಲಿಲ್ಲ ಎಂದು ತೆಲುಗು, ತಮಿಳಿನ ವೇದಿಕೆಗಳಲ್ಲಿಯೇ ಹೇಳಿದ್ದರು ಎಸ್‍ಪಿಬಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery