` ಮೇಘನಾ ರಾಜ್ ಬಗ್ಗೆ ಇಂತಹ ಸುಳ್ಳು ಸುದ್ದಿ ಹಬ್ಬಿಸಬೇಡಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
dont spread fake news anout meghana raj
Meghana Raj

ನಟಿ ಮೇಘನಾ ರಾಜ್ ಇನ್ನೂ ತಮ್ಮ ಪತಿ ಚಿರಂಜೀವಿ ಸರ್ಜಾ ಅಕಾಲಿಕ ಮರಣದ ಆಘಾತದಿಂದ ಹೊರಬಂದಿಲ್ಲ. ಪತಿ ಮೃತಪಟ್ಟಾಗ ಗರ್ಭಿಣಿಯಾಗಿದ್ದ ಮೇಘನಾ ರಾಜ್ ಅವರನ್ನು ಇಡೀ ಕುಟುಂಬ ಜತನದಿಂದ ನೋಡಿಕೊಳ್ಳುತ್ತಿದೆ. ಹೀಗಿರೋವಾಗಲೇ ಕೆಲವು ವೆಬ್‍ಸೈಟ್ ಹಾಗೂ ಯೂಟ್ಯೂಬ್ ಚಾನೆಲ್ಲುಗಳು ಮೇಘನಾ ರಾಜ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿವೆ.

ಮೇಘನಾ ರಾಜ್ ಅವರಿಗೆ ಹೆರಿಗೆಯಾಗಿದೆ. ಅವರು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದೆಲ್ಲ ಸುಳ್ಳು ಸುದ್ದಿ ಹಬ್ಬಿಸಿವೆ. ಇದರಿಂದ ನೊಂದಿರುವುದು ಸ್ವತಃ ಮೇಘನಾ ರಾಜ್. ಇಂತಹ ಕೆಲವು ಮೀಡಿಯಾಗಳ ಸ್ಕ್ರೀನ್ ಶಾಟ್ ಶೇರ್ ಮಾಡಿರುವ ಮೇಘನಾ ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ. ಕೆಲವು ಯೂಟ್ಯೂಬ್ ಮತ್ತು ಸೋಷಿಯಲ್ ಮೀಡಿಯಾ ಚಾನೆಲ್ಲುಗಳು ತಮ್ಮ ವೀಕ್ಷಕರನ್ನು ಹೆಚ್ಚಿಸಿಕೊಳ್ಳಲು ನನ್ನ ಕುಟುಂಬವನ್ನು ಬಳಸಿಕೊಳ್ಳುತ್ತಿವೆ. ಈ ವಿಷಯದ ಬಗ್ಗೆ ನಾನೇ ಮಾತನಾಡುತ್ತೇನೆ. ನನ್ನ ಬಗ್ಗೆ ನಮ್ಮ ಕುಟುಂಬದವರು ಅಥವಾ ನಾನೇ ಮಾತನಾಡದ ಹೊರತು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery