Print 
loose mada yogi,

User Rating: 0 / 5

Star inactiveStar inactiveStar inactiveStar inactiveStar inactive
 
loose mada yogi clarifies
Loose Mada Yogi

ಡ್ರಗ್ಸ್ ಕೇಸ್‍ನಲ್ಲಿ ಲೂಸ್ ಮಾದ ಯೋಗಿ ವಿಚಾರಣೆ ನಡೆದಿದ್ದೇ ತಡ, ಯೋಗಿ ಮೇಲೆ ಎಲ್ಲರಿಗೂ ಅನುಮಾನ. ಹೌದಾ..? ಯೋಗಿ ಡ್ರಗ್ಸ್ ತೆಗೆದುಕೊಳ್ತಿದ್ದಾರಾ..? ಯೋಗಿ ಡ್ರಗ್ಸ್ ಪೆಡ್ಲರ್ ಆಗಿದ್ದಾರಾ..? ಹೀಗೆ.. ಹತ್ತು ಹಲವು ಅನುಮಾನಗಳಿಗೆ ಯೋಗಿ ನೇರಾನೇರವಾಗಿ ಉತ್ತರ ಕೊಟ್ಟಿದ್ದಾರೆ.

ನನಗೆ ಸಿಗರೇಟು, ಡ್ರಿಂಕ್ಸ್ ಮತ್ತು ಗುಟ್ಕಾ ಚಟಗಳಿದ್ದದ್ದು ಹೌದು. ಅತಿಯಾಗಿದ್ದುದೂ ಹೌದು. ಆದರೆ ಆ ಚಟಗಳಿಂದಲೂ ಈಗ ಹೊರಬಂದಿದ್ದೇನೆ.

 

ನನಗೆ ಡ್ರಗ್ಸ್ ಗೊತ್ತಿಲ್ಲ. ಯಾವತ್ತೂ ತೆಗೆದುಕೊಂಡಿಲ್ಲ. ಡ್ರಗ್ಸ್ ಪಾರ್ಟಿಗಳಿಗೂ ಹೋಗಿಲ್ಲ.

 

ರಾಗಿಣಿ ಜೊತೆ 2013ರಲ್ಲಿ ಒಂದು ಸಿನಿಮಾ ಮಾಡಿದ್ದೆ. ಅದಾದ ನಂತರ ಅವರ ಜೊತೆಯಲ್ಲೂ ನನಗೆ ಸಂಪರ್ಕವಿಲ್ಲ. ರಾಗಿಣಿಗೆ ಕರೆ ಮಾಡಿ 8 ವರ್ಷಗಳೇ ಆಗಿ ಹೋಗಿವೆ.

 

ರಾಗಿಣಿ ಜೊತೆ ಸಂಪರ್ಕ, ಸಂಬಂಧ ಇದೆ ಎಂದು ವರದಿ ಮಾಡಬೇಡಿ. ನನಗೆ, ಕುಟುಂಬದವರಿಗೆ ಬೇಸರವಾಗುತ್ತೆ.

 

ಪೊಲೀಸರು ರಾಗಿಣಿ ಬಗ್ಗೆಯಾಗಲೀ, ಐಂದ್ರಿತಾ, ದಿಗಂತ್ ಬಗ್ಗೆಯಾಗಲೀ ಪ್ರಶ್ನೆ ಮಾಡಿಲ್ಲ. ಅವರು ಕೇಳಿದ್ದು ಹಾಗೂ ನಾನು ಹೇಳಿದ್ದನ್ನು ಹೊರಗೆ ಬಹಿರಂಗ ಮಾಡಬೇಡಿ ಎಂದು ಹೇಳಿದ್ದಾರೆ. ಹೀಗಾಗಿ ನಾನು ಅವುಗಳ ವಿವರವನ್ನು ಕೊಡೋಕೆ ಸಾಧ್ಯವಿಲ್ಲ.