` ಅಕ್ಟೋಬರ್‍ನಲ್ಲಿ ಮತ್ತೆ ಶುರು ಮದಕರಿ ಘರ್ಜನೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Rajaveera Madakari Nayaka Film Shoot To Resume In October
Rajaveera Madakari Nayaka Film Shoot

ಕೊರೊನಾದಿಂದಾಗಿ ಬ್ರೇಕ್ ತೆಗೆದುಕೊಂಡಿದ್ದ ರಾಜವೀರ ಮದಕರಿ ನಾಯಕ ಚಿತ್ರಕ್ಕೆ ಅಕ್ಟೋಬರ್ ಶುಭ ಘಳಿಗೆಯಾಗುತ್ತಿದೆ. ಈಗಾಗಲೇ ರಾಜಸ್ಥಾನದಲ್ಲಿ ಒಂದು ಹಂತದ ಶೆಡ್ಯೂಲ್ ಮುಗಿಸಿರೋ ಚಿತ್ರತಂಡ, 2ನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ತಿದೆ. ಚಿತ್ರದುರ್ಗ, ಬೆಂಗಳೂರು ಮತ್ತು ಹುಬ್ಬಳ್ಳಿಗಳಲ್ಲಿ 2ನೇ ಶೆಡ್ಯೂಲ್ ಅಕ್ಟೋಬರ್‍ನಲ್ಲಿ ಶುರುವಾಗಲಿದೆ.

ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಚಿತ್ರದಲ್ಲಿ ಮದಕರಿ ನಾಯಕನಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿದ್ದಾರೆ. ಮದಕರಿ ನಾಯಕನ ತಾಯಿಯ ಪಾತ್ರದಲ್ಲಿ ರಾಜಮಾತೆಯಾಗಿ ನಟಿಸುತ್ತಿರುವುದು ಸುಮಲತಾ ಅಂಬರೀಷ್. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರ, ಕೊರೊನಾ, ಲಾಕ್‍ಡೌನ್‍ನಿಂದಾಗಿ ಕಳೆದ 6 ತಿಂಗಳಿಂದ ಬ್ರೇಕ್ ತೆಗೆದುಕೊಂಡಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery