` ಸಂಜನಾ ಅಲ್ಲ ಮಾಹಿರಾ : ಸುಳ್ಳು ಹೇಳಿದ್ಯಾಕೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sanjana or mahira
Sanjana Galrani

ಚಿತ್ರನಟಿ, ಗಂಡ ಹೆಂಡತಿ ಖ್ಯಾತಿಯ ಸಂಜನಾ, ಸದ್ಯಕ್ಕೆ ಜೈಲಲ್ಲಿದ್ದಾರೆ. ಡ್ರಗ್ಸ್ ದಂಧೆ ಕೇಸ್‍ನಲ್ಲಿ ಆರೋಪಿಯಾಗಿರೋ ಸಂಜನಾ ಹಿಂದೂ ಧರ್ಮವನ್ನೇ ತ್ಯಜಿಸಿರೋದು ಈಗ ಸಾಬೀತಾಗಿದೆ. 2018ರ ಅಕ್ಟೋಬರ್ 9ರಂದು ಸಂಜನಾ, ಬೆಂಗಳೂರಿ ಟ್ಯಾನರಿ ರಸ್ತೆಯಲ್ಲಿರೋ  ದಾರುಲ್ ಉಲೂಮ್ ಶಾಹ್ ವಲಿವುಲ್ಲಾದಲ್ಲಿ ಮತಾಂತರವಾಗಿದ್ದಾರೆ.

ಸಂಜನಾ ಅವರ ಮೂಲ ಹೆಸರು ಅರ್ಚನಾ. ಮೊದಲ ಸಿನಿಮಾ ಆಟೋಗ್ರಾಫ್ ಪ್ಲೀಸ್ ಚಿತ್ರದಲ್ಲಿ ಅರ್ಚನಾ ಆಗಿಯೇ ನಟಿಸಿದ್ದ ಸಂಜನಾ, ಗಂಡ ಹೆಂಡತಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಮೇಲೆ ಸಂಜನಾ ಆಗಿ ಬದಲಾಗಿದ್ದರು. ನಂತರ ತಮ್ಮ ಹೆಸರಿನ ಮುಂದೆ ಗಲ್ರಾನಿ ಎಂಬ ಸರ್‍ನೇಮ್‍ನ್ನೂ ಸೇರಿಸಿಕೊಂಡಿದ್ದರು. ಆದರೆ.. ಇದೆಲ್ಲದರ ನಡುವೆಯೇ ಸಂಜನಾ ಹಿಂದೂ ಧರ್ಮ ಬಿಟ್ಟು ಹೋಗಿದ್ದಾರೆ. ಅರ್ಚನಾ ಮನೋಹರ್ ಅಲಿಯಾಸ್ ಸಂಜನಾ ಈಗ ಮಾಹಿರಾ.

ವಿಚಿತ್ರವೆಂದರೆ ಸಂಜನಾ ಅರೆಸ್ಟ್ ಆಗುವ ಹಿಂದಿನ ದಿನ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸಿದ್ದರು. ಎಲ್ಲಿಯೂ ಕೂಡಾ ತಾವು ಮತಾಂತರವಾಗಿರೋದನ್ನು ಹೇಳಿಕೊಂಡಿರಲಿಲ್ಲ. ಅಷ್ಟೇ ಅಲ್ಲ, ತಮಗೆ ಮದುವೆಯಾಗಿಲ್ಲ ಎಂದು ಮಾಧ್ಯಮಗಳ ಎದುರು ಹೇಳಿದ್ದರು. ಅದಾದ ಕೆಲವೇ ದಿನಗಳಲ್ಲಿ ಡಾ.ಪಾಷಾ ಎಂಬುವವರ ಜೊತೆ ನಿಖಾ ಆಗಿರುವ ಫೋಟೋಗಳು ವೈರಲ್ ಆಗಿದ್ದವು.

ಸಂಜನಾ ಮತಾಂತರವಾಗಿರೋದು ಸತ್ಯ ಎಂದು ದಾರುಲ್ ಉಲುಮ್ ಶಾಹ್ ವಲಿವುಲ್ಲಾ ಮಸೀದಿಯ ಮೌಲಾನಾ ಮಹಮ್ಮದ್ ಜೈನಲಬುದ್ದೀನ್ ರಸಾದಿ ಸ್ಪಷ್ಟಪಡಿಸಿದ್ದಾರೆ. ಅವರಿಗೆ ಯಾವುದೇ ಒತ್ತಡ ಹೇರಿರಲಿಲ್ಲ. ಅವರಾಗಿಯೇ ಬಂದು ಧರ್ಮ ಸ್ವೀಕರಿಸಿದ್ದಾರೆ ಎಂದಿದ್ದಾರೆ ಮೌಲಾನ ರಸಾದಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery