ದಿವ್ಯ ಸ್ಪಂದನಾ ಅಲಿಯಾಸ್ ರಮ್ಯಾ ಡ್ರಗ್ಸ್ ವಿಚಾರದಲ್ಲಿ ಮೊದಲ ಬಾರಿಗೆ ಬಾಯಿತೆರೆದಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಪ್ರತ್ಯಕ್ಷವಾಗಿರೋ ರಮ್ಯಾ ನಿಧಾನವಾಗಿ ಆಕ್ಟಿವ್ ಆಗುತ್ತಿದ್ದಾರೆ. ರಮ್ಯಾ ಕೆಲವೊಂದು ಬುದ್ದಿಮಾತುಗಳನ್ನೂ ಹೇಳಿದ್ದಾರೆ. ಆ ಬುದ್ದಿಮಾತುಗಳೆಲ್ಲ ಬಾಲಿವುಡ್‍ನಲ್ಲಿ ಬೆಂಕಿಯನ್ನೇ ಹೊತ್ತಿಸಿರುವ ನಟಿ ಕಂಗನಾ ರಣಾವತ್‍ಗೆ ಅನ್ನೋದು ವಿಶೇಷ.
ನೀವು ಡ್ರಗ್ಸ್ ವ್ಯಸನಿಗಳ ವಿವರ ಬಹಿರಂಗಪಡಿಸುವ ಮಾತನಾಡುತ್ತಿದ್ದೀರಿ. ಸಾಧ್ಯವಾದರೆ ಅದರ ಬದಲು ಅಂತಹವರನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿ. ದೀಪಿಕಾ ಪಡುಕೋಣೆ ಅವರನ್ನು ನೋಡಿ ಕಲಿಯಿರಿ. ನಾನೂ ಡ್ರಗ್ಸ್ ವ್ಯಸನಿಯಾಗಿದ್ದೆ ಎಂದು ಒಪ್ಪಿಕೊಂಡು ಧೈರ್ಯ ತೋರಿಸಿದ್ದೀರಿ. ನೀವು ಆ ವ್ಯಸನದಿಂದ ಮುಕ್ತರಾಗಿದ್ದು ಹೇಗೆ ಅನ್ನೊದನ್ನು ಬಹಿರಂಗಪಡಿಸಿ. ಖಿನ್ನತೆಯಿಂದ ತಾನು ಹೇಗೆ ಹೊರಬಂದೆ ಅನ್ನೋದನ್ನು ಹೇಳಿಕೊಂಡು ಹಲವರಿಗೆ ಮಾದರಿಯಾಗಿರೋ ದೀಪಿಕಾ ಪಡುಕೋಣೆ ಅವರನ್ನು ಅನುಸರಿಸಿ' ಎಂದು ಸಲಹೆ ನೀಡಿದ್ದಾರೆ ರಮ್ಯಾ.