` ಅಂತೂ ಇಂತೂ ವಿಷ್ಣು ಸ್ಮಾರಕಕ್ಕೆ ಸಿಎಂ ಬಿಎಸ್‍ವೈ ಶಂಕು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vishnu memorial work begins after 11 years
Vishnu Smaraka Work Begins

ಸುಮಾರು 11 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಿಷ್ಣು ಸ್ಮಾರಕಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಮೈಸೂರಿನ ಹಾಲಾಳು ಗ್ರಾಮದಲ್ಲಿ ನಿರ್ಮಿಸುತ್ತಿರುವ ವಿಷ್ಣು ಸ್ಮಾರಕಕ್ಕೆ ಆನ್‍ಲೈನ್ ಮೂಲಕವೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಸ್ಮಾರಕ ನಿರ್ಮಾಣ ಸ್ಥಳದಲ್ಲಿ ಡಾ.ಭಾರತಿ ವಿಷ್ಣುವರ್ಧನ್, ಫಿಲಂಚೇಂಬರ್ ಅಧ್ಯಕ್ಷ ಜೈರಾಜ್, ಅನಿರುದ್ಧ್ ಸ್ಥಳೀಯ ಶಾಸಕರು ಇದ್ದರೆ, ಬೆಂಗಳೂರಿನಿಂದ ಆನ್‍ಲೈನ್ ಮೂಲಕ ಸಿಎಂ ಬಿಎಸ್‍ವೈ, ಡಿಸಿಎಂ ಗೋವಿಂದ ಕಾರಜೋಳ ಇದ್ದರು.

ಈಗಾಗಲೇ ವಿಳಂಬವಾಗಿದೆ. ಹೀಗಾಗಿ ಕಾಮಗಾರಿಯನ್ನು ಆದಷ್ಟು ಬೇಗನೆ ಮುಗಿಸಲು ಎಲ್ಲ ಕ್ರಮ ಕೈಗೊಳ್ಳುತ್ತೇವೆ ಎಂದರು ಸಿಎಂ ಯಡಿಯೂರಪ್ಪ.

ಡಾ.ವಿಷ್ಣುವರ್ಧನ್ ಕನ್ನಡಿಗರನ್ನು ಅಗಲಿ 11 ವರ್ಷಗಳೇ ಆಗಿ ಹೋಗಿವೆ. 2009ರ ಡಿಸೆಂಬರ್ 30ರಂದು ವಿಷ್ಣು ವಿಧಿವಶರಾಗಿದ್ದರು. ಅಂದಿನಿಂದಲೂ ನಡೆಯುತ್ತಿದ್ದ ಹೋರಾಟ ಈಗ ಒಂದು ತಾರ್ಕಿಕ ಹಂತಕ್ಕೆ ಬಂದಿದೆ. ಮೈಸೂರಿನಲ್ಲಿ ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದಾರೆ.