ಕಾಮಿಡಿ ಕಿಂಗ್ ಶರಣ್ ಮತ್ತು ಚುಟು ಚುಟು ಚೆಲುವೆ ಅಶಿಕಾ ರಂಗನಾಥ್ ಅಭಿನಯದ ಅವತಾರ ಪುರುಷ, ಇದೇ ಡಿಸೆಂಬರ್ 25ಕ್ಕೆ ರಿಲೀಸ್ ಆಗಲಿದೆಯಾ..? ಪೆಂಡಿಂಗ್ ಇರೋ ಚಿತ್ರದ ಶೂಟಿಂಗ್‍ನ್ನು ಇತ್ತೀಚೆಗಷ್ಟೇ ಶುರು ಮಾಡಿರುವ ಚಿತ್ರತಂಡ ಡಿಸೆಂಬರ್ ಕೊನೆಯ ವಾರಕ್ಕೆ ಚಿತ್ರ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ಇದು ಸ್ಟಾರ್ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರ. ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಬ್ಲಾಕ್ ಮ್ಯಾಜಿಕ್ ಕಥೆಯೂ ಇದೆ. ಶರಣ್, ಅಶಿಕಾ ಜೊತೆಗೆ ಸುಧಾರಾಣಿ, ಸಾಯಿಕುಮಾರ್ ಹಾಗೂ ಶ್ರೀನಗರ ಕಿಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಸದ್ಯಕ್ಕೆ ಚಿತ್ರಮಂದಿರ ಓಪನ್‍ಗೆ ಇನ್ನೂ ಗ್ರೀನ್ ಸಿಕ್ಕಿಲ್ಲ. ಹೀಗಿರುವಾಗ ಡಿ.25ಕ್ಕೆ ರಿಲೀಸ್ ಆಗೋಕೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆಯ ಜೊತೆಗೆ, ಅಷ್ಟೊತ್ತಿಗೆ ಎಲ್ಲವೂ ಕಂಟ್ರೋಲಿಗೆ ಬಂದು ಸಿನಿಮಾ ರಿಲೀಸ್ ಆದರೂ ಆಗಬಹುದು ಎಂಬ ನಿರೀಕ್ಷೆಯೂ ಇದೆ.