` ಡ್ರಗ್ಸ್ ಕೇಸ್ : ಐಂದ್ರಿತಾ ಹೆಸರು ಬಂದಿದ್ದೇಕೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Aindritha Clarifies About Her Party With Shaik Fazil
Aindritha Rai

ಡ್ರಗ್ಸ್ ಕೇಸ್ ಸ್ಯಾಂಡಲ್‍ವುಡ್‍ನ ಹಲವರ ನಿದ್ದೆಗೆಡಿಸಿದೆ. ರಾಗಿಣಿ ಮತ್ತು ಸಂಜನಾ ಅರೆಸ್ಟ್ ಬೆನ್ನಲ್ಲೇ ಇನ್ನೂ ಹಲವರು ಚಿಂತಿತರಾಗಿದ್ದಾರೆ. ಅದಕ್ಕೆ ತಕ್ಕಂತೆ ಡ್ರಗ್ಸ್ ಕೇಸ್‍ನಲ್ಲಿ ಕೇಳಿಬರುತ್ತಿರೋ ಹೆಸರುಗಳ ಜೊತೆ ಚಿತ್ರರಂಗದ ನಟ, ನಟಿಯರ ಹೆಸರು ಥಳುಕು ಹಾಕಿಕೊಂಡಿರೋದೂ ಕೂಡಾ ಇದಕ್ಕೆಲ್ಲ ಕಾರಣ.

ಡ್ರಗ್ಸ್ ಕೇಸ್ ತನಿಖೆಯ ಹಾದಿಯಲ್ಲಿ ಈಗ ಹೊಸದೊಂದು ವಿಡಿಯೋ ಪ್ರತ್ಯಕ್ಷವಾಗಿದೆ. ಜಮೀರ್ ಬಂಟ ಶೇಖ್ ಫಾಜಿಲ್ ಜೊತೆ ನಟಿ ಐಂದ್ರಿತಾ ರೇ ಇರುವ ವಿಡಿಯೋ ಅದು. ಶೇಖ್ ಫಾಜಿಲ್ ಶ್ರೀಲಂಕಾದ ಕ್ಯಾಸಿನೋ ಕಿಂಗ್. ಜಸ್ಟ್ 10 ವರ್ಷಗಳ ಹಿಂದೆ ಇದೇ ಚಾಮರಾಜ ಪೇಟೆಯಲ್ಲಿ ಟ್ಹೂ ವ್ಹೀಲರ್ ಮೆಕಾನಿಕ್ ಆಗಿದ್ದವನು, ಈಗ ಸಾವಿರಾರು ಕೋಟಿಗೆ ತೂಗುತ್ತಾನೆ. ಅದು ಬೇರೆ ಕಥೆ. ಆದರೆ ಯಾವಾಗ ಐಂದ್ರಿತಾ ರೇ ಹೆಸರು ಹೊರಬಂತೋ.. ಎಲ್ಲರೂ ಐಂದ್ರಿತಾ ಬೆನ್ನು ಬಿದ್ದರು. ಇದಕ್ಕೆಲ್ಲ ಐಂದ್ರಿತಾ ಸ್ಪಷ್ಟನೆ ಕೊಟ್ಟಿದ್ದಾರೆ.

``ಅದು 3 ವರ್ಷಗಳ ಹಿಂದಿನ ವಿಡಿಯೋ. ಹಿಂದಿ ಚಿತ್ರವೊಂದರ ಪ್ರಚಾರಕ್ಕಾಗಿ ಲಂಕಾಗೆ ಹೋಗಿದ್ದುದು ನಿಜ. ಅಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ್ದೆ. ನಟಿ ಆಗಿರೋ ಕಾರಣ ಮಾತನಾಡೋಕೆ ಕೇಳಿಕೊಂಡಿದ್ದರು. ಇಷ್ಟರ ಹೊರತಾಗಿ ನನಗೆ ಶೇಖ್ ಫಾಜಿಲ್ ಪರಿಚಯ ಇಲ್ಲ'' ಇದು ನಟಿ ಐಂದ್ರಿತಾ ರೇ ಸ್ಪಷ್ಟನೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery