ನಿಖಿಲ್ ಕುಮಾರಸ್ವಾಮಿ ಅವರ ಮುಂದಿನ ಚಿತ್ರ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತ್ತಾದರೂ, ಕಥೆ, ಟೈಟಲ್ ಬಗ್ಗೆ ಮಾಹಿತಿ ಇರಲಿಲ್ಲ. ಈಗ ಲಹರಿ ಪ್ರೊಡಕ್ಷನ್ಸ್ ನಿಖಿಲ್ ಚಿತ್ರದ ಅಪ್‍ಡೇಟ್ ಕೊಟ್ಟಿದೆ.
ನಿಖಿಲ್ ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು ರೈಡರ್. ಟಾಲಿವುಡ್ ನಿರ್ದೇಶಕ ವಿಜಯ್ ಕುಮಾರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಿಖಿಲ್ ಸ್ಪೋಟ್ರ್ಸ್‍ಮನ್ ಇರಬಹುದು ಎಂಬ ಕುತೂಹಲ ಹುಟ್ಟಿಸಿರುವುದು ಚಿತ್ರದ ಮೋಷನ್ ಪೋಸ್ಟರ್.
ನಿಖಿಲ್ ಅಭಿನಯದ ಮೊದಲ ಚಿತ್ರ ಜಾಗ್ವಾರ್‍ನ್ನು ತೆಲುಗಿನಲ್ಲೂ ನಿರ್ಮಾಣ ಮಾಡಲಾಗಿತ್ತು. ನಂತರ ಕುರುಕ್ಷೇತ್ರ ಚಿತ್ರ ತೆಲುಗಿಗೆ ಡಬ್ ಆಗಿ ಹೋಗಿ ಸದ್ದು ಮಾಡಿತ್ತು. 3ನೇ ಚಿತ್ರ ಸೀತಾರಾಮ ಕಲ್ಯಾಣ, ತೆಲುಗು ಚಿತ್ರವೊಂದರ ರೀಮೇಕ್ ಆಗಿತ್ತು. ಈಗ 4ನೇ ಚಿತ್ರಕ್ಕೆ ತೆಲುಗಿನ ನಿರ್ದೇಶಕರೇ ಬಂದಿದ್ದು, ಈ ಚಿತ್ರವೂ ತೆಲುಗಿನಲ್ಲಿ ರೆಡಿಯಾಗಲಿದೆ.
ನಿಖಿಲ್ ಎದುರು ಕಾಶ್ಮೀರಾ ಪರದೇಶಿ ನಾಯಕಿಯಾಗಿದ್ದು, ದತ್ತಣ್ಣ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ, ರಾಜೇಶ್ ನಟರಂಗ, ಶೋಭರಾಜ್ ಮೊದಲಾದವರು ನಟಿಸಲಿದ್ದಾರೆ.