` ಡ್ರಗ್ಸ್ ಕೇಸ್ : ಸಂಜನಾ ಮನೆ ಮೇಲೆ ದಾಳಿ ವೇಳೆ ಸಿಸಿಬಿ ಇಟ್ಟ ಎಚ್ಚರಿಕೆಯ ಹೆಜ್ಜೆ ಏನು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
durind raid on sanjana's house, ccb took extra precautions
Sanjana Galrani

ಡ್ರಗ್ಸ್ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ. ಅದ್ಯಾರಿಗೆ ಧೈರ್ಯವಿದೆ, ನನಗೆ ನೋಟಿಸ್ ಕೊಡೋಕೆ, ನನ್ನ ಮನೆ ಮೇಲೆ ರೇಡ್ ಮಾಡೋಕೆ ಆಗಲ್ಲ ಎಂದು ಬೀಡುಬೀಸಾಗಿ ಮಾತನಾಡಿದ್ದ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ರೇಡ್ ಮಾಡಿದ್ದಾರೆ.

ಇಂದಿರಾ ನಗರದಲ್ಲಿರೋ ಸಂಜನಾ ಮನೆ ಮೇಲೆ ಮಧ್ಯರಾತ್ರಿ ದಾಳಿ ಮಾಡಿರುವ ಅಧಿಕಾರಿಗಳು ಇಡೀ ಮನೆಯ ತಪಾಸಣೆ ಮಾಡಿದ್ದಾರೆ.

ಸಂಜನಾ ಮನೆ ಮೇಲೆ ದಾಳಿ ಮಾಡಿದ ವೇಳೆ ಮುಂಜಾಗ್ರತಾ ಕ್ರಮವಾಗಿ ದಾಳಿಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಏಕೆಂದರೆ, ಅಕಸ್ಮಾತ್ ನಾಳೆಯೇನಾದರೂ ಸಂಜನಾ ಮನಸ್ಸಿಗೆ ಬಂದಂತೆ ಮಾತನಾಡಿಬಿಟ್ಟರೆ ಎಂಬ ಭಯ. ಹೀಗಾಗಿ ಸಿಸಿಬಿಯವರು ಕೋರ್ಟ್‍ನಿಂದ ಸರ್ಚ್ ವಾರೆಂಟ್ ಪಡೆದೇ ದಾಳಿ ಮಾಡಿದ್ದಾರೆ. ಕಾನೂನಾತ್ಮಕವಾಗಿ ಯಾವುದೇ ಸಮಸ್ಯೆ ಎದುರಾಗದಂತೆ ಎಚ್ಚರಿಕೆಯ ಹೆಜ್ಜೆಯಿಟ್ಟಿದೆ ಪೊಲೀಸ್ ಟೀಂ.

ರಾಗಿಣಿ ಮನೆ ಮೇಲೆ ದಾಳಿ ಮಾಡಿದ್ದ ಅಂಜುಮಾಲ, ಪೂರ್ಣಿಮಾ ಇದ್ದ ತಂಡವನ್ನು ಪುನೀತ್ ನೇತೃತ್ವ ವಹಿಸಿಕೊಂಡಿದ್ದರು. 9 ಗಂಟೆಯ ಬಳಿಕ ಸಿಸಿಬಿ ಕಚೇರಿಗೆ ಕರೆದೊಯ್ಯುವ ಸಾಧ್ಯತೆ ಇದೆ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery