ಡ್ರಗ್ಸ್ ಕೇಸ್‍ಗೆ ಸಂಬಂಧಪಟ್ಟಂತೆ ನಟಿ ರಾಗಿಣಿ ನಿವಾಸದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬೆಳಗ್ಗೆ 6.30ರ ಸುಮಾರಿಗೆ ಸಿಸಿಬಿ ಅಧಿಕಾರಿಗಳ ತಂಡ ಯಲಹಂಕದಲ್ಲಿರೋ ರಾಗಿಣಿ ನಿವಾಸದ ಮೇಲೆ ರೈಡ್ ಮಾಡಿದೆ. ಅರೆಸ್ಟ್ ಆಗಿರುವ ರಾಗಿಣಿ ಆಪ್ತ ರವಿಶಂಕರ್ ನೀಡಿರುವ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ ಎನ್ನಲಾಗಿದೆ.
ಮೊನ್ನೆ ರಾತ್ರಿ ರಾಗಿಣಿ ಆಪ್ತ ರವಿಶಂಕರ್‍ನನ್ನು ಅರೆಸ್ಟ್ ಮಾಡಲಾಗಿತ್ತು. ಆತ ಡ್ರಗ್ಸ್ ಪೆಡ್ಲರ್ ಎನ್ನಲಾಗಿದ್ದು, ಆತ ನೀಡುತ್ತಿರು ಮಾಹಿತಿ ಸ್ವತಃ ಪೊಲೀಸರನ್ನೂ ಬೆಚ್ಚಿ ಬೀಳಿಸಿದೆ. ಮತ್ತೊಂದೆಡೆ ನಟಿ ಸಂಜನಾ ಗಲ್ರಾನಿ ಅವರ ಆಪ್ತ ರಾಹುಲ್ ಮತ್ತು ಶರ್ಮಿಳಾ ಮಾಂಡ್ರೆ ಅವರ ಆಪ್ತ ಗೆಳೆಯ ಕಾರ್ತಿಕ್ ರಾಜ್‍ನನ್ನು ವಶಕ್ಕೆ ಪಡೆಯಲಾಗಿದೆ. ರಾಗಿಣಿ ಆಪ್ತ ರವಿಶಂಕರ್‍ನನ್ನು ಮಾತ್ರವೇ ಅರೆಸ್ಟ್ ಮಾಡಲಾಗಿದೆ.
ರಾಗಿಣಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗದೇ ಇದ್ದರೆ ಅರೆಸ್ಟ್ ಮಾಡುವ ಸಾಧ್ಯತೆಗಳೂ ಇವೆ.