` ಉಪ್ಪಿಯ ಕಬ್ಜಕ್ಕೊಂದು ವೆಬ್‍ಸೈಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
uppi's kabza gets a website
Upendra's Kabza

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಮೂವಿ ಕಬ್ಜ ಚಿತ್ರಕ್ಕೆ ಪ್ರತ್ಯೇಕ ವೆಬ್‍ಸೈಟ್ ಲಾಂಚ್ ಮಾಡಲಾಗಿದೆ. ಈ ವೆಬ್‍ಸೈಟ್‍ನ್ನು ಉಪ್ಪಿ ಅವರ ಆಪ್ತಮಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಉದ್ಘಾಟಿಸಿದ್ದು ವಿಶೇಷ. ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ. ನಂತರ ತಮಿಳು, ಮಲಯಾಳಂ, ಮರಾಠಿ, ಹಿಂದಿ ಮತ್ತು ಒರಿಯಾ ಭಾಷೆಗಳಲ್ಲಿ ಡಬ್ ಆಗಲಿದೆ. ಒಟ್ಟು 7 ಭಾಷೆಗಳಲ್ಲಿ ಬರುತ್ತಿರೋ ಚಿತ್ರವಿದು.

ಶಾಸಕ ಎಂಟಿಬಿ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಪ್ರಕಾಶ್ ರೈ, ಜಗಪತಿ ಬಾಬು, ಕೋಟಾ ಶ್ರೀನಿವಾಸ ರಾವ್, ಬೊಮನ್ ಇರಾನಿ, ಕಬೀರ್ ಸಿಂಗ್ ದುಹಾನ್ ಮೊದಲಾದವರು ನಟಿಸಿರುವ ಚಿತ್ರವಿದು.