` ಗಾಂಜಾ ಕಾನೂನುಬದ್ಧ ಮಾಡಿ : ನಿವೇದಿತಾ ನಂತರ ಈಗ ರಾಕೇಶ್ ಅಡಿಗ ಸರದಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
legalize ganja rakesh adiga says
Rakesh Adiga

ಗಾಂಜಾ ಗಿಡ ಮಾದಕ ವಸ್ತು ಅಲ್ಲ, ಅದೊಂದು ಔಷಧೀಯ ಸಸ್ಯ. ತುಳಸಿ ಗಿಡಕ್ಕೆ ಸಮಾನ. ಅದನ್ನು ಕಾನೂನುಬದ್ಧಗೊಳಿಸಬೇಕು ಎಂದು ನಟಿ ನಿವೇದಿತಾ ವಾದಿಸಿದ್ದರು. ನಿವೇದಿತಾ ವಾದ ವಿಚಿತ್ರವೂ, ವಿಭಿನ್ನವೂ ಆಗಿದ್ದ ಕಾರಣ, ಎಲ್ಲರ ಗಮನವನ್ನೂ ಸೆಳೆದಿತ್ತು. ಹೀಗೂ ಇರೋಕೆ ಸಾಧ್ಯನಾ ಎಂದು ಯೋಚಿಸುತ್ತಿರುವಾಗಲೇ ಅದೇ ವರಸೆಯಲ್ಲಿ ಇನ್ನೊಬ್ಬ ನಟ ಮಾತನಾಡಿದ್ದಾರೆ. ನಾನು ಗಾಂಜಾ ಸೇವಿಸಿದ್ದೇನೆ. ಗಾಂಜಾದಿಂದ ಮಾಡಿದ ಕೇಕ್, ಚಟ್ನಿ, ಪಕೋಡ ತಿಂದಿದ್ದೇನೆ. ಮದ್ಯಸೇವನೆಯಂತೆಯೇ ಇದನ್ನೂ ಹತೋಟಿಯಲ್ಲಿಟ್ಟುಕೊಳ್ಳಬಹುದು. ಸಿಗರೇಟಿಗೆ ಹೋಲಿಸಿದರೆ ಗಾಂಜಾ ಅಷ್ಟು ಅಪಾಯಕಾರಿಯಲ್ಲ ಎನ್ನುವುದು ರಾಕೇಶ್ ಅಡಿಗ ವಾದ.

ಗಾಂಜಾವನ್ನು ಕಾನೂನುಬದ್ಧ ಮಾಡಬೇಕು ಎಂಬ ಅರ್ಜಿಯೊಂದು ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ಹಂತದಲ್ಲಿದೆ ಎಂದಿರುವ ರಾಕೇಶ್ ಅಡಿಗ, ಇದು ನನ್ನ ವೈಯಕ್ತಿಕ ಅಭಿಪ್ರಾಯಗಳು ಮಾತ್ರ. ಇದಕ್ಕಾಗಿ ನಾನು ಹೋರಾಟ ಮಾಡುವವನಲ್ಲ ಎಂದಿದ್ದಾರೆ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery