ಕೆಲವು ನಟರು ಪಾನ್ ಮಸಾಲಾ, ಜೂಜಿನ ಜಾಹೀರಾತುಗಳಲ್ಲಿ ನಟಿಸುತ್ತಾರೆ. ಕೇವಲ ಹಣಕ್ಕಾಗಿ ಮದ್ಯ, ಪಾನ್ ಮಸಾಲಾ, ಗುಟ್ಕಾ, ತಂಬಾಕು, ಜೂಜುಗಳ ಜಾಹೀರಾತುಗಳಲ್ಲಿ ನಟಿಸುತ್ತಾರೆ. ಅವರ ವಿರುದ್ಧ ಬೆರಳು ತೋರಿಸದೇ ಇರೋದು ಮೋಸ ಅಲ್ವಾ..? ಇಂಥಾದ್ದೊಂದು ಪ್ರಶ್ನೆಯನ್ನು ಆ ದಿನಗಳು ಖ್ಯಾತಿಯ ಚೇತನ್ ಎತ್ತಿದ್ದರು. ಚೇತನ್ ಯಾವಾಗಲೂ ಹಾಗೇ.. ಒಂದು ವಿಷಯ ಬೆಂಕಿಯಂತೆ ಧಗಧಗಿಸುತ್ತಿರುವಾಗ, ಚೇತನ್ ಇನ್ನೆಲ್ಲೋ ಹೊತ್ತಿರುವ ಕಿಡಿಯನ್ನು ಹೊತ್ತುತಂದು ಉಫ್ ಉಫ್ ಎಂದು ಬೆಳಗಿಸುವ ಪ್ರಯತ್ನ ಮಾಡುತ್ತಾರೆ.
ಸದ್ಯಕ್ಕೆ ಕನ್ನಡದಲ್ಲಿ ಮದ್ಯ, ಪಾನ್, ಗುಟ್ಕಾ ಜಾಹೀರಾತುಗಳಲ್ಲಿ ನಟಿಸುತ್ತಿರುವ ನಟರಿಲ್ಲ. ಆದರೆ ರಮ್ಮಿ ಜಾಹೀರಾತಿನಲ್ಲಿ ಕಿಚ್ಚ ಸುದೀಪ್ ಇದ್ದಾರೆ. ಚೇತನ್ ಅವರ ಈ ಪರೋಕ್ಷ ಟೀಕೆಗೆ ಸ್ವತಃ ಸುದೀಪ್ ಉತ್ತರ ಕೊಟ್ಟಿದ್ದಾರೆ.
ಅವರು ಬಹುಶಃ ಮೋದಿಯನ್ನೋ, ರಾಷ್ಟ್ರಪತಿಗಳನ್ನೋ ಕೇಳೋಕೆ ಹೋಗಿರಬೇಕು. ಏಕೆಂದರೆ ಅವರು ಸದಾ ಅವರನ್ನೇ ಪ್ರಶ್ನೆ ಕೇಳುತ್ತಿರುತ್ತಾರೆ. ಅಲ್ಲದೆ ಇವುಗಳಿಗೆ ಅನುಮತಿ ಕೊಟ್ಟಿರುವುದೂ ಅವರೇ. ಮೋಸ್ಟ್ ಲೀ ಅವರು ಮೋದಿ ಅಥವಾ ರಾಷ್ಟ್ರಪತಿಗಳ ಬಗ್ಗೆಯೇ ಮಾತನಾಡಿರಬೇಕು ಎಂದಿದ್ದಾರೆ. ಏನು ಕೇಳಬೇಕು ಎಂದುಕೊಂಡಿದ್ದೀರೋ.. ನೇರವಾಗಿ ಕೇಳಲಿ. ಅವರಿಗೆ ಬೇರೇನೋ ಸಮಸ್ಯೆ ಇರಬೇಕು ಎಂದಿದ್ದಾರೆ ಕಿಚ್ಚ.