ರತ್ನನ್ ಪ್ರಪಂಚ, ಡಾಲಿ ಧನಂಜಯ್ ಹೀರೋ ಆಗಿ ನಟಿಸುತ್ತಿರುವ ಸಿನಿಮಾ. ಕೆಆರ್‍ಜಿ ಸ್ಟುಡಿಯೋಸ್‍ನ ಕಾರ್ತಿಕ್ ಗೌಡ ನಿರ್ಮಾಪಕರಾಗಿರೋ ಸಿನಿಮಾ ಸೆಟ್ಟೇರಿದ್ದು, ಮುಹೂರ್ತದಲ್ಲಿ ಸ್ಟಾರ್ ಡೈರೆಕ್ಟರುಗಳ ಸಮೂಹವೇ ಭಾಗಿಯಾಗಿದ್ದು ವಿಶೇಷವಾಗಿತ್ತು.
ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್, ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಹಲವರು ಭಾಗವಹಿಸಿದ್ದರು.
ಡಾಲಿ ಧನಂಜಯ್ ಹೀರೋ ಆಗಿರುವ ಚಿತ್ರಕ್ಕೆ ರೆಬಾ ಮೋನಿಕಾ ನಾಯಕಿ. ರೋಹಿತ್ ಪದಕಿ ನಿರ್ದೇಶನದ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ.