ಇತ್ತೀಚೆಗೆ ಮೃತಪಟ್ಟ ಯುವ ನಟನೊಬ್ಬನ ಪೋಸ್ಟ್ ಮಾರ್ಟಂ ಏಕೆ ಆಗಲಿಲ್ಲ..? ಆತನಿಗೂ ಡ್ರಗ್ಸ್ ವ್ಯಸನವಿತ್ತು ಎಂಬರ್ಥದ ಹೇಳಿಕೆಗಳನ್ನು ನೀಡಿದ್ದ ಇಂದ್ರಜಿತ್ ಲಂಕೇಶ್, ಚಿರು ಸರ್ಜಾ ಮೇಲೆ ಅನುಮಾನದ ಬೊಟ್ಟು ಮೂಡುವಂತೆ ಮಾಡಿದ್ದರು. ಹೆಸರನ್ನೇ ಹೇಳದೆ ಚಿರು ಹೆಸರು ಚರ್ಚೆಯಾಗುವಂತೆ ಮಾಡಿದ್ದರು. ಅವರು ಹೇಳ್ತಿರೋದು ಚಿರಂಜೀವಿ ಸರ್ಜಾ ಬಗ್ಗೆಯೇ ಅನ್ನೋದ್ರಲ್ಲಿ ಅನುಮಾನವೇನೂ ಇರಲಿಲ್ಲ. ಇದರ ಬಗ್ಗೆ ಬೇಸರಗೊಂಡಿದ್ದು ಸರ್ಜಾ ಕುಟುಂಬ.
ಚಿರು ಪತ್ನಿ ಮೇಘನಾ ರಾಜ್ ಅವರಂತೂ ಕಣ್ಣೀರು ಹಾಕಿದ್ದಾರೆ. ಅವರೀಗ ಗರ್ಭಿಣಿ. ಇಂತಹ ಹೊತ್ತಿನಲ್ಲಿ ಇದೆಲ್ಲ ಬೇಕಾ ಎಂದು ಅಭಿಮಾನಿಗಳು ಇಂದ್ರಜಿತ್ ಲಂಕೇಶ್ ಅವರಿಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಈಗ ಚಿರು ಇಲ್ಲ. ಅವರ ಫೋಟೋ ನೋಡಿದರೂ ಕಣ್ಣೀರು ಬರುತ್ತೆ. ನಿಮ್ಮ ಆರೋಪಗಳಿಗೆ ಉತ್ತರ ಕೊಡೋಕೂ ಅವರಿಲ್ಲ. ಇಲ್ಲದೇ ಇರುವ ವ್ಯಕ್ತಿಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಬೇಕಿತ್ತಾ..? ಇದು ಮೇಘನಾ ರಾಜ್ ಪ್ರಶ್ನೆ.
ಚಿರಂಜೀವಿ ಸರ್ಜಾ ಪರ ನಿಂತು ವಾದ ಮಾಡಿದ ಪ್ರಶಾಂತ್ ಸಂಬರಗಿ ಮತ್ತು ಶಿವಾರ್ಜುನ್ ಅವರಿಗೆ ಧ್ರುವ ಸರ್ಜಾ ಧನ್ಯವಾದ ಹೇಳಿದ್ದಾರೆ. ತಮ್ಮ ಅಣ್ಣ ಅಂತಹವರಲ್ಲ ಅನ್ನೋದು ಧ್ರುವ ಸರ್ಜಾ ಮಾತು.
ಗೊತ್ತಿದ್ರೆ ಹೇಳಿ, ಸುಮ್ಮನೆ ಟ್ರೇಲರ್ ಕೊಡಬೇಡಿ ಅನ್ನೋ ರೀತಿಯಲ್ಲಿ ಉತ್ತರ ಕೊಟ್ಟಿರೋದು ನಟ ನವೀನ್ ಕೃಷ್ಣ.