` ಶರಣೆ ಸಂಕಮ್ಮನ ಈ ಕಥೆಯನ್ನು ಚಂದನ್ ಶೆಟ್ಟಿ ತಿಳಿದುಕೊಳ್ಳಬೇಕಿತ್ತು..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kolumande jangamadeva
CHandan Shetty's Kolumande Jangamadeva

ಕೋಲುಮಂಡೆ ಜಂಗಮ ದೇವ.. ಜಾನಪದ ಗೀತೆಯನ್ನು ರ್ಯಾಪ್ ಶೈಲಿಯಲ್ಲಿ ಹಾಡಿ ಹಿಟ್ ಆಗಿದ್ದಾರೆ ಚಂದನ್ ಶೆಟ್ಟಿ. ಜೊತೆಯಲ್ಲಿ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದಾರೆ. ಶರಣೆ ಸಂಕಮ್ಮನನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎನ್ನುವುದು ಚಂದನ್ ಶೆಟ್ಟಿ ಮೇಲಿರೋ ಆರೋಪ. ಅದರಲ್ಲಿ ಸತ್ಯ ಇಲ್ಲದೆ ಏನಿಲ್ಲ. ಚಂದನ್ ಶೆಟ್ಟಿ, ಗ್ಲಾಮರ್ ಹೆಸರಿನಲ್ಲಿ ಶರಣೆಯನ್ನು ಬಿಕಿನಿ ಮಾದರಿಯ ಡ್ರೆಸ್‍ನಲ್ಲಿ ತೋರಿಸಿರುವುದು ಒಪ್ಪಲು ಸಾಧ್ಯವಿಲ್ಲ. ಮಾದಪ್ಪನ ಭಕ್ತರಿಗಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಇದು ನೋವು ತಂದಿದೆ.

ಇಷ್ಟಕ್ಕೂ ಶರಣೆ ಸಂಕಮ್ಮನ ಕಥೆಯೇನು ಗೊತ್ತೇ.. ಸಂಕಮ್ಮ ಮತ್ತು ನೀಲಯ್ಯ ದಂಪತಿಗಳು. ಸಂಕಮ್ಮನೋ ಅದ್ಭುತ ಸುಂದರಿ. ಊರವರ ಕಣ್ಣೆಲ್ಲ ನನ್ನ ಹೆಂಡತಿಯೇ ಮೇಲೇ ಇದೆ ಎಂದು ಅನುಮಾನಗೊಳುತ್ತಾನೆ ನೀಲಯ್ಯ. ಹೆಂಡತಿಯನ್ನು ಬಿಟ್ಟು ಕದಲೋದಿಲ್ಲ. ಆದರೆ ಹೊಟ್ಟೆಪಾಡಿಗೆ ಜೇನು ತರಲು ಕಾಡಿಗೆ ಹೋಗಬೇಕಲ್ಲ. ಹಾಗೆ ಹೊರಟಾಗ ಹೆಂಡತಿಯ ಬಳಿ ಯಾವುದೇ ಪುರುಷರನ್ನು ಮುಟ್ಟೋದಿಲ್ಲ ಎಂದು ವಚನ ಕೊಡು ಎನ್ನುತ್ತಾನೆ.

ನಾನು ತಪ್ಪು ಮಾಡಿದ್ದರೆ ಸಾಕ್ಷಿ ಕೊಡು. ಅನುಮಾನ ಬೇಡ ಎನ್ನುತ್ತಾಳೆ. ಗಂಡನನ್ನು ಪ್ರತಿರೋಧಿಸುತ್ತಾಳೆ. ಆಗ ನೀಲಯ್ಯ ಹೆಂಡತಿಗೆ ಸೀರೆ ಬಿಟ್ಟು, ಎಲೆಯ ಬಟ್ಟೆ ತೊಡಿಸಿ, ಮನೆಯ ಸುತ್ತ ಮಂಡಲ ಸೃಷ್ಟಿಸಿ, ರಾಕ್ಷಸ ಗೊಂಬೆಯನ್ನು ಕಾವಲಿಗಿಟ್ಟು ಹೋಗುತ್ತಾನೆ. ಆಗ ಮಾದಯ್ಯನನ್ನು ಬೇಡಿಕೊಳ್ಳುವ ಸಂಕಮ್ಮನನ್ನು ಹಲ್ಲಿಯ ರೂಪದಲ್ಲಿ ಬಂದು ಕಾಯುತ್ತಾನೆ ಮಾದಪ್ಪ. ಇದು ಕಥೆ.

ಆದರೆ ಚಂದನ್ ಶೆಟ್ಟಿ ಹಾಡಿನಲ್ಲಿ ಸಂಕಮ್ಮನನ್ನು ಬಳೆಗಾರನ ಮೋಡಿಗೆ ಬೀಳುವ ಹೆಣ್ಣಾಗಿ, ಕಡಿಮೆ ಬಟ್ಟೆಯಲ್ಲಿ ತೋರಿಸಿದ್ದಾರೆ. ಸಿಂಪಲ್ಲಾಗ್ ಹೇಳ್ಬೇಕಂದ್ರೆ ಕ್ಯಾಬರೆ ಡ್ರೆಸ್. ಇದು ಭಕ್ತರ ಸಿಟ್ಟಿಗೆ ಕಾರಣವಾಗಿದೆ. ಇಲ್ಲಿ ಚಂದನ್ ಶೆಟ್ಟಿ ತಿಳಿದುಕೊಳ್ಳಬೇಕಾಗಿದ್ದ ವಿಷಯ ಇಷ್ಟೆ...

ತಾನು ಮಾದಪ್ಪನ ಭಕ್ತರ ಜಾನಪದ ಗೀತೆಯನ್ನು ಹಾಡು ಮಾಡುತ್ತಿದ್ದೇನೆ. ಭಕ್ತರ ಭಾವನೆಗೆ ಧಕ್ಕೆಯಾಗಬಾರದು ಎಂಬ ವಿಷಯ. ವಿವಾದವಾದರೆ ಜನಪ್ರಿಯತೆ ಹೆಚ್ಚಲಿದೆ ಎಂದು ಹೊರಟಾಗ ಇಂತಹ ಭಾನಗಡಿಗಳಾಗುತ್ತವೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery