` ಕೊರೊನಾ ಗೆದ್ದ ಎಸ್‍ಪಿಬಿ. ಆದರೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sp balasubramanyam tests negative for corona
SP Balasubramanyam

ಕಳೆದ 20 ದಿನಗಳಿಂದ ಆಸ್ಪತ್ರೆಯಲ್ಲಿರೋ ಗಾನಕೋಗಿಲೆ ಎಸ್‍ಪಿ ಬಾಲ ಸುಬ್ರಹ್ಮಣ್ಯಂ ಕೊರೊನಾ ಗೆದ್ದಿದ್ದಾರೆ. 74 ವರ್ಷದ ಎಸ್‍ಪಿಬಿ ಅವರ ಕೊರೊನಾ ಟೆಸ್ಟ್ ಸತತ 19 ದಿನಗಳ ನಂತರ ನೆಗೆಟಿವ್ ಬಂದಿದೆ. ಸ್ಸೋ.. ಕೊರೊನಾದಿಂದ ಬಾಲಸುಬ್ರಹ್ಮಣ್ಯಂ ಬಚಾವ್. ಆದರೆ..

ಬಾಲಸುಬ್ರಹ್ಮಣ್ಯಂ ಅವರ ಶ್ವಾಸಕೋಶ ಸಮಸ್ಯೆ ಇನ್ನೂ ಸಂಪೂರ್ಣ ಸರಿಹೋಗಿಲ್ಲ. ಎಸ್‍ಪಿಬಿ ಅವರಿಗೆ ಇಸಿಎಂಓ ಚಿಕಿತ್ಸೆ ಮುಂದುವರೆಸಲಾಗಿದೆ. ಇಸಿಎಂಓ ಅಂದ್ರೆ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸುವ ಸಿಸ್ಟಂ. ಸದ್ಯಕ್ಕೆ ಎಸ್‍ಪಿಬಿ ಅವರ ರಕ್ಷಾಕವಚ ಇದೇ ಇಸಿಎಂಓ.

ಎಸ್‍ಪಿಬಿ ಅವರ ಪತ್ನಿ ಸಾವಿತ್ರಿ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದು, ಡಿಸ್‍ಚಾರ್ಜ್ ಮಾಡಲಾಗಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery