` ಎಸ್‍ಪಿಬಿ ಗುಣಮುಖರಾಗುವಂತೆ ಚಿತ್ರರಂಗದ ಸಾಮೂಹಿಕ ಪ್ರಾರ್ಥನೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sp balasubramanyam image
sp balasubramanyam

ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಗುಣಮುಖರಾಗಲೆಂದು ದೇಶಾದ್ಯಂತ ಕೋಟ್ಯಂತರ ಹೃದಯಗಳು ಹಾರೈಸುತ್ತಿವೆ. ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಸಂಗೀತ ಮಾಂತ್ರಿಕ ಇಳಯರಾಜಾ ಸೇರಿದಂತೆ ಚಿತ್ರರಂಗದ ಹಿರಿ ಕಿರಿಯ ಕಲಾವಿದರು, ತಂತ್ರಜ್ಞರು, ಗಾಯಕರು ಎಸ್‍ಪಿಬಿಗಾಗಿ ಪ್ರಾರ್ಥಿಸುತ್ತಿದ್ದಾರೆ.

ಇದೇ ವೇಳೆ ಚಿತ್ರರಂಗದವರೆಲ್ಲ ಸೇರಿ ಏಕಕಾಲದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಿದ್ದಾರೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಚೇತರಿಕೆಗಾಗಿ ಪ್ರಾರ್ಥಿಸಿ ಇಂದು (ಗುರುವಾರ) ಸಂಜೆ 6 ಗಂಟೆಗೆ ಮನೆ ಮನೆಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.

you_tube_chitraloka1.gif

ಭಾರತದಲ್ಲಿ ಸಂಜೆ 6 ಗಂಟೆಯಾದರೆ, ಅಮೆರಿಕದಲ್ಲಿ ಬೆಳಗ್ಗೆ 8.30 ಹಾಗೂ ದುಬೈನಲ್ಲಿ ಮಧ್ಯಾಹ್ನ 4.30ಕ್ಕೆ ಸಾಮೂಹಿಕವಾಗಿ ಮನೆ ಮನೆಗಳಲ್ಲಿಯೇ ಪ್ರಾರ್ಥನೆ ನಡೆಯಲಿದೆ.

ಬೇಗ ಗುಣಮುಖರಾಗಿ ಬನ್ನಿ ಎಸ್‍ಪಿಬಿ ಸರ್..

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery