ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಪುತ್ರ ನಿರಂಜನ್, ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಉಪೇಂದ್ರ ಅವರೇ ನಟಿಸಿದ್ದ ಸೂಪರ್ ಸ್ಟಾರ್ ಅನ್ನೋ ಚಿತ್ರ ನೆನಪಿದೆಯಲ್ವೇ..? ಅದೇ ಟೈಟಲ್ನ ಚಿತ್ರದಲ್ಲಿ ನಿರಂಜನ್ ನಟಿಸುತ್ತಿದ್ದಾರೆ. ಆಗಸ್ಟ್ 20ಕ್ಕೆ ಸೂಪರ್ ಸ್ಟಾರ್ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ.
ವಿಶೇಷವೆಂದರೆ ಆ ಟೀಸರ್ಗೆ ಧ್ವನಿ ನೀಡಿರುವುದು ರಾಕಿಂಗ್ ಸ್ಟಾರ್ ಯಶ್. ಸೂಪರ್ ಸ್ಟಾರ್ ಡೈರೆಕ್ಟರ್ ರಮೇಶ್ ವೆಂಕಟೇಶ್ ಬಾಬು ಈಗಾಗಲೇ ಯಶ್ ವಾಯ್ಸ್ ರೆಕಾರ್ಡಿಂಗ್ ಮಾಡಿಟ್ಟುಕೊಂಡಿದ್ದಾರೆ.