ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪ್ಪಟ ಕೃಷಿಕ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಹಾಲು ಕರೆಯೋದ್ರಲ್ಲಿ ದರ್ಶನ್ ಬೊಂಬಾಟ್. ಹಸುಗಳನ್ನು ಸಾಕೋದು ದರ್ಶನ್‍ಗೆ ತುಂಬಾನೇ ಇಷ್ಟ. ಇದೆಲ್ಲದರ ಜೊತೆಗೆ ತಮ್ಮ ಫಾರ್ಮ್ ಹೌಸ್‍ನಲ್ಲಿ ವಿವಿಧ ಪ್ರಾಣಿ, ಪಕ್ಷಿಗಳನ್ನು ಸಾಕಿಕೊಂಡಿರುವ ದರ್ಶನ್, ಈಗ ಮೇಕೆ ಕೃಷಿಗೂ ಕೈ ಹಾಕಿದ್ದಾರೆ.
ಧಾರವಾಡಕ್ಕೆ ಭೇಟಿ ನೀಡಿದ್ದ ದರ್ಶನ್, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಫಾರ್ಮ್ ಹೌಸ್‍ನಲ್ಲಿ ಹಲವು ಮೇಕೆಗಳನ್ನು ಖರೀದಿಸಿದ್ದಾರೆ. ಕೆಜಿಗೆ 400 ರೂಪಾಯಿ ಲೆಕ್ಕದಂತೆ ವಿನಯ್ ಕುಲಕರ್ಣಿ, ದರ್ಶನ್‍ಗೆ ಮೇಕೆಗಳನ್ನು ನೀಡಿದ್ದಾರೆ.
ಅಫ್‍ಕೋರ್ಸ್, ವಿನಯ್ ಕುಲಕರ್ಣಿ ಬೇರೆಯವರಿಗೆ ಕೆಜಿಗೆ 500 ರೂ.ಗಳಂತೆ ಕೊಡ್ತಾರಂತೆ. ಗೆಳೆಯ ಎಂಬ ಕಾರಣಕ್ಕೆ ದರ್ಶನ್‍ಗೆ ಡಿಸ್ಕೌಂಟ್ ಎಂದಿದ್ದಾರೆ ವಿನಯ್ ಕುಲಕರ್ಣಿ.
ಇದೇ ವೇಳೆ ಎತ್ತಿನ ಚಕ್ಕಡಿ ಓಡಿಸಿದ ದರ್ಶನ್, ತಾವು ಹೈಫೈ ಕಾರುಗಳಿಗೂ ಸೈ, ಚಕ್ಕಡಿ ಓಡಿಸೋಕೂ ಸೈ ಎನ್ನೋದನ್ನ ಸಾಬೀತು ಮಾಡಿದ್ದಾರೆ.