ಇವತ್ತು ಇಂಡಿಪೆಂಡೆನ್ಸ್ ಡೇ. 74ನೇ ಸ್ವಾತಂತ್ರ್ಯೋತ್ಸವ ಸಂಭ್ರಮ. ಈ ದಿನ ಕನ್ನಡ ಚಿತ್ರರಂಗದ 6 ಗಣ್ಯರಿಗೆ ಹುಟ್ಟುಹಬ್ಬದ ಸಂಭ್ರಮವಿದೆ. ರಾಘವೇಂದ್ರ ರಾಜ್'ಕುಮಾರ್ : ರಾಘಣ್ಣಗೀಗ 55ನೇ ಹುಟ್ಟುಹಬ್ಬ. 1965ರ ಆಗಸ್ಟ್ 15ರಂದು ಚೆನ್ನೈನಲ್ಲಿ ಜನಸಿದ್ದರು ರಾಘವೇಂದ್ರ.
ಅರ್ಜುನ್ ಸರ್ಜಾ : 1964ರ ಆಗಸ್ಟ್ 15ರಂದು ಜನಿಸಿರುವ ಆರ್ಜುನ್ ಸರ್ಜಾಗೆ ಇವತ್ತು 56ನೇ ಹುಟ್ಟುಹಬ್ಬ.
ನಾಗತಿಹಳ್ಳಿ ಚಂದ್ರಶೇಖರ್ : 1958ರ ಆಗಸ್ಟ್ 15ರಂದು ನಾಗತಿಹಳ್ಳಿಯಲ್ಲಿ ಜನಿಸಿದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಇವತ್ತು 62ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಸಂತೋಷ್ ಆನಂದರಾಮ್ : ಮಿ. & ಮಿಸೆಸ್ ರಾಮಾಚಾರಿ, ರಾಮಾಚಾರಿ ಚಿತ್ರಗಳ ಸ್ಟಾರ್ ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೂ ಇವತ್ತು ಹುಟ್ಟುಹಬ್ಬ. 1985ರ ಆಗಸ್ಟ್ 15ರಂದು ಹುಟ್ಟಿದ ಸಂತೋಷ್‍ಗೆ ಇವತ್ತು 35ನೇ ಹುಟ್ಟುಹಬ್ಬದ ಸಂಭ್ರಮ.
ಭಾರತಿ ವಿಷ್ಣುವರ್ಧನ್ : ಕನ್ನಡ ಚಿತ್ರರಂಗದ ಹಿರಿಯ ನಟಿ ಭಾರತಿ ಅವರಿಗೆ 70ನೇ ಹುಟ್ಟುಹಬ್ಬದ ಸಂಭ್ರಮ. 1950ರ ಆಗಸ್ಟ್ 15ರಂದು ಜನಿಸಿದ್ದರು ಭಾರತಿ.
ಸುಹಾಸಿನಿ : ಕನ್ನಡ ಚಿತ್ರರಸಿಕರ ಪಾಲಿನ ಅಮೃತವರ್ಷಿಣಿ ಸುಹಾಸಿನಿ ಅವರಿಗೆ ಇವತ್ತು 59ನೇ ಹುಟ್ಟುಹಬ್ಬದ ಸಂಭ್ರಮ. 1961ರ ಆಗಸ್ಟ್ 15, ಸುಹಾಸಿನಿ ಹುಟ್ಟಿದ ದಿನ.
ಈ ಎಲ್ಲರ ಜೊತೆಗಿನ ಹುಟ್ಟುಹಬ್ಬದ ಸಂಭ್ರಮವನ್ನು ಒಂದೇ ಒಂದು ದಿನ ಮೊದಲು ಮಿಸ್ ಮಾಡಿಕೊಂಡವರು ನಟಿ ಸುಧಾರಾಣಿ. ಸುಧಾರಾಣಿ ಆಗಸ್ಟ್ 14ರಂದು ಜನಿಸಿದವರು. ನಿನ್ನೆಯಷ್ಟೇ ಸುಧಾರಾಣಿ 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.