ಹಿರಿಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ದೇಹಸ್ಥಿತಿ ಗಂಭೀರವಾಗಿದೆ. ಆಗಸ್ಟ್ 5ರಂದು ಕೊರೊನಾ ಪಾಸಿಟಿವ್ ಬಂದ ನಂತರ ಎಸ್‍ಪಿಬಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದರು. ಚೆನ್ನೈನ ಎಂಜಿಎಂ ಹೆಲ್ತ್‍ಕೇರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್‍ಪಿಬಿ ಅವರಿಗೆ ಉಸಿರಾಟದ ವ್ಯವಸ್ಥೆ ಎದುರಾದ್ದರಿಂದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ.
ಸದ್ಯಕ್ಕೆ ಐಸಿಯುನಲ್ಲಿರುವ ಎಸ್‍ಪಿಬಿ, ಹಾಸಿಗೆಯಿಂದಲೇ ಗೆಲುವಿನ ಚಿಹ್ನೆ ತೋರಿಸಿ, ಇದನ್ನೂ ಗೆದ್ದು ಬರುತ್ತೇನೆ ಎಂಬ ಸಂದೇಶ ನೀಡಿದ್ದಾರೆ. ಚಿತ್ರೋದ್ಯಮದ ಗೆಳೆಯರು, ಲಕ್ಷಾಂತರ ಅಭಿಮಾನಿಗಳು ದೇಶದಾದ್ಯಂತ ಎಸ್‍ಪಿಬಿ ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಎಸ್‍ಪಿಬಿ ಶೀಘ್ರ ಗುಣಮುಖರಾಗಿ ಬರಲಿ..