ಫ್ಯಾಂಟಮ್ ಚಿತ್ರದ ವಿಕ್ರಾಂತ್ ರೋಣನ ಲುಕ್ ನೋಡಿ ಥ್ರಿಲ್ ಆಗಿದ್ದವರಿಗೆ ಈಗ ಫಕೀರನ ಲುಕ್ಕೂ ಸಿಕ್ಕಿದೆ. ಸರ್‍ಪ್ರೈಸ್ ಕೊಡುತ್ತೇನೆ ಎಂದಿದ್ದ ನಿರ್ದೇಶಕ ಅನೂಪ್ ಭಂಡಾರಿ, ಚಿತ್ರದ ಇನ್ನೊಬ್ಬ ಹೀರೋ ನಿರೂಪ್ ಭಂಡಾರಿಯ ಪಾತ್ರ ಬಹಿರಂಗ ಪಡಿಸಿದ್ದಾರೆ.
ಚಿತ್ರದಲ್ಲಿ ನಿರೂಪ್ ಭಂಡಾರಿ ಪಾತ್ರದ ಹೆಸರು ಸಂಜೀವ್ ಗಂಭೀರ್. ಲಂಡನ್ನಿನಿಂದ ಭಾರತಕ್ಕೆ ವಾಪಸ್ ಆದ ಹುಡುಗ. ನಗುತ್ತಾ.. ನಗಿಸುತ್ತಾ.. ತರಲೆ ಮಾಡುತ್ತಾ ಇರುವ ಯುವಕ. ಹೆಸರು ಮಾತ್ರ ಸಂಜೀವ್ ಗಂಭೀರ್. ಅವರ ಪಾತ್ರಕ್ಕೆ ಇನ್ನೊಂದು ಹೆಸರೇ ಫಕೀರ.
ನಟ ನಿರೂಪ್ ಅವರನ್ನು ಈ ಪೋಸ್ಟರ್ ಮೂಲಕ ಸ್ವಾಗತ ಕೋರಿದ್ದಾರೆ ಚಿತ್ರದ ಹೀರೋ ಕಿಚ್ಚ ಸುದೀಪ್, ನಿರ್ಮಾಪಕ ಜ್ಯಾಕ್ ಮಂಜು. ಫ್ಯಾಂಟಮ್ ಇನ್ನೂ ಶೂಟಿಂಗ್‍ನಲ್ಲಿದೆ.ಕೂಡಾ ಇದ್ದರು.