` ಹೆಸರಘಟ್ಟದಲ್ಲೇ ಫಿಲಂಸಿಟಿ : ಡಿಸಿಎಂ ಅಶ್ವತ್ಥ್ ನಾರಾಯಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sandalwood film city to be set up in hesaraghatta
DCM Ashwath Narayan, Shivarajkumar

ಕನ್ನಡ ಚಿತ್ರರಂಗದ ಎಲ್ಲ ಒಕ್ಕೂಟಗಳ ನಾಯಕರಾಗಿರುವ ಶಿವರಾಜ್ ಕುಮಾರ್ ಡಿಸಿಎಂ ಅಶ್ವತ್ಥ್ ನಾರಾಯಣ್ ಅವರನ್ನು ಭೇಟಿಯಾಗಿ ಚಿತ್ರರಂಗದ ಸಮಸ್ಯೆ ವಿವರಿಸಿದ್ದಾರೆ. ಚಿತ್ರರಂಗದ ಕಷ್ಟಗಳಿಗೆ ಸ್ಪಂದಿಸುವ ಭರವಸೆಯೂ ಸರ್ಕಾರದಿಂದ ಸಿಕ್ಕಿದೆ. ಇತ್ತೀಚೆಗೆ ಕೊರೊನಾದಿಂದ ಗುಣಮುಖರಾಗಿ ಬಂದಿರುವ ಸಿಎಂ ಯಡಿಯೂರಪ್ಪ ಅವರ ಭೇಟಿಗೆ ಮುಂದಿನ ವಾರ ಸಮಯ ನಿಗದಿ ಮಾಡುವುದಾಗಿ ತಿಳಿಸಿರುವ ಅಶ್ವತ್ಥ್ ನಾರಾಯಣ, ಹೆಸರಘಟ್ಟದಲ್ಲಿಯೇ ಫಿಲಂಸಿಟಿ ಮಾಡಲಾಗುವುದು ಎಂದಿದ್ದಾರೆ.

ಈ ಮೊದಲು ರೋರಿಚ್ ಎಸ್ಟೇಟ್‍ನಲ್ಲಿ ಚಿತ್ರನಗರಿ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಆದರೆ, ಅಲ್ಲಿ ಪರಿಸರಾತ್ಮಕ ಸಮಸ್ಯೆಗಳು ಎದುರಾದವು. ಹೀಗಾಗಿ ಹೆಸರಘಟ್ಟದಲ್ಲಿಯೇ ಫಿಲಂ ಸಿಟಿ ಮಾಡುವುದಾಗಿ ಹೇಳಿದ್ದಾರೆ.

ಹೆಸರಘಟ್ಟದಲ್ಲಿ ಪಶು ಸಂಗೋಪನಾ ಇಲಾಖೆಯ 450 ಎಕರೆ ಭೂಮಿ ಇದೆ. ಅದರಲ್ಲಿ 150 ಎಕರೆ ಭೂಮಿಯನ್ನು ಚಿತ್ರನಗರಿಗೆ ನೀಡುತ್ತೇವೆ. ಶೀಘ್ರದಲ್ಲೇ ಸರ್ವೇ ಕಾರ್ಯ ಶುರುವಾಗಲಿದೆ ಎಂದಿದ್ದಾರೆ ಅಶ್ವತ್ಥ್ ನಾರಾಯಣ್.

ಅಷ್ಟೇ ಅಲ್ಲ, ಚಿತ್ರರಂಗದ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯ ಅಡಿಗೆ ತರಲು ಮಾಡಿರುವ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಡಿಸಿಎಂ. ಇದರಿಂದ ಚಿತ್ರೋದ್ಯಮದ ಕಾರ್ಮಿಕರಿಗೆ, ಸರ್ಕಾರದಿಂದ ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯ, ಸವಲತ್ತುಗಳೂ ಸಿಗಲಿವೆ.

ಶಿವರಾಜ್ ಕುಮಾರ್ ಅವರೊಂದಿಗೆ ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ಕಾರ್ತಿಕ್ ಗೌಡ ಕೂಡಾ ಇದ್ದರು.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery