ಕಿಚ್ಚ ಸುದೀಪ್ ಸಿಂಹಾಸನವೇರಿದ್ದಾರೆ. ಇದು ಫ್ಯಾಂಟಮ್ ಚಿತ್ರಕ್ಕಾಗಿ. ಸದ್ದೇ ಇಲ್ಲದ ಸರ್‍ಪ್ರೈಸ್ ಕೊಟ್ಟಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ಸಿಂಹಾಸನದ ಮೇಲೆ ಕುಳಿತಿರೋ ವಿಕ್ರಾಂತ್ ರೋಣನ ಪೋಸ್ಟರ್ ಹೊರಬಿಟ್ಟಿದ್ದಾರೆ. ಜೊತೆಗೆ ಕೈಯ್ಯಲ್ಲಿ ಗನ್.
ವಿಕ್ರಾಂತ್ ರೋಣ ಅನ್ನೋ ಹೆಸರಲ್ಲಿ ಎಷ್ಟು ಪವರ್ ಇದೆಯೋ, ಅಷ್ಟೇ ಪವರ್ ಆತನ ಪಾತ್ರಕ್ಕೂ ಇದೆ. ಅವನು ತುಂಬಾ ಪವರ್‍ಫುಲ್. ಅವನು ಏನು ಮಾಡ್ತಾನೋ ಯಾರಿಗೂ ಅರ್ಥ ಆಗಲ್ಲ. ಆದರೆ, ಅದರ ಹಿಂದೆ ಬಲವಾದ ಕಾರಣ ಇರುತ್ತೆ ಅನ್ನೋದು ಅನೂಪ್ ಭಂಡಾರಿ ಮಾತು.
ಹೈದರಾಬಾದ್‍ನಲ್ಲಿ ಫ್ಯಾಂಟಮ್ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಶೀಘ್ರದಲ್ಲೇ ಒಂದೊಂದೇ ಪಾತ್ರದ ಲುಕ್ ಬಹಿರಂಗವಾಗಲಿದೆ.