` ಅನುಷ್ಕಾ ಕೊಹ್ಲಿಯ ಆ 2 ಶಬ್ಧಕ್ಕೆ ಕನ್ನಡಿಗರು ಥ್ರಿಲ್ ಆಗಿಬಿಟ್ರಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
anushka sharma's swlpa swalpa wins kannadigas heart
Anushka Sharma

ಅನುಷ್ಕಾ ಶರ್ಮಾ, ಕನ್ನಡತಿಯೇನಲ್ಲ. ಉತ್ತರ ಪ್ರದೇಶದ ಹುಡುಗಿ. ವಿರಾಟ್ ಕೊಹ್ಲಿಯ ಮನದನ್ನೆ. ಕೊಹ್ಲಿಯ ಪತ್ನಿ ಎಂದಷ್ಟೇ ಅಲ್ಲ, ಅನುಷ್ಕಾ ಶರ್ಮಾಗೆ ಪ್ರತ್ಯೇಕ ಸ್ಥಾನಮಾನ ಅಸ್ಥಿತ್ವಗಳೂ ಇವೆ. ಇಂತಹ ಹುಡುಗಿ ಬಳಸಿದ ಎರಡೇ ಎರಡು ಶಬ್ಧಗಳಿಗೆ ಕನ್ನಡಿಗರು ಥ್ರಿಲ್ ಆದ ಕಥೆ ಇದು.

ಇತ್ತೀಚೆಗೆ ಸೋಷಿಯಲ್ ಮೀಡಿಯಾ ಪೇಜ್‍ನಲ್ಲಿ ಅಭಿಮಾನಿಗಳೊಂದಿಗೆ ಲೈವ್‍ನಲ್ಲಿದ್ದಾಗ ಒಂದು ಪ್ರಶ್ನೆ ಬಂದಿದೆ. ಮೇಡಂ ನಿಮಗೆ ಕನ್ನಡ ಬರುತ್ತಾ..?  ಆ ಪ್ರಶ್ನೆಗೆ ಅನುಷ್ಕಾ ಸ್ವಲ್ಪ ಸ್ವಲ್ಪ ಎಂದು ಉತ್ತರಿಸಿದ್ದಾರೆ. ಕನ್ನಡಿಗರನ್ನು ಥ್ರಿಲ್ ಮಾಡಿರುವುದೇ ಆ 2 ಪದಗಳು. ಸ್ವಲ್ಪ ಸ್ವಲ್ಪ..

ಉತ್ತರ ಭಾರತದ ಹುಡುಗಿಗೆ ಕನ್ನಡ ಹೇಗೆ ಗೊತ್ತು ಅನ್ನೋದು ಗೊತ್ತು ಅನ್ನೋ ಪ್ರಶ್ನೆನಾ..? ಅನುಷ್ಕಾ ಶರ್ಮಾ ಹುಟ್ಟಿದ್ದಷ್ಟೇ ಉತ್ತರ ಭಾರತ. ವಿದ್ಯಾಭ್ಯಾಸ ನಡೆದಿದ್ದೆಲ್ಲ ಬೆಂಗಳೂರಿನಲ್ಲಿ. ಹೀಗಾಗಿ ಕನ್ನಡ ಗೊತ್ತಿರಲೇಬೇಕು. ಹಾಗೆ ನೋಡಿದರೆ, ಇಲ್ಲಿಯ ವರ್ಷಗಟ್ಟಲೆ ಓದಿದ ಹುಡುಗಿಗೆ ಕನ್ನಡ ಸ್ವಲ್ಪ ಸ್ವಲ್ಪ ಅಷ್ಟೇ ಗೊತ್ತು ಅನ್ನೋದು ಸಮಾಧಾನದ ವಿಷಯವೇ. ಇಲ್ಲಿಯೇ ಹುಟ್ಟಿ ಬೆಳೆದ ಎಷ್ಟೋ ಜನ ಕನ್ನಡ್ ಗೊತ್ತಿಲ್ಲ, ಕನ್ನಡ ತೆಲೀದು, ಕನ್ನಡ್ ತೆರಿಯಾದ್, ಕನ್ನಡ್ ಸಮಜ್‍ಭೀ ನೈ ಎನ್ನುತ್ತಿರುವಾಗ ಅನುಷ್ಕಾ ಶರ್ಮಾ ಕನ್ನಡ  ಗೊತ್ತು ಎಂದರಲ್ಲ.. ಖುಷಿ ಪಡೋಣ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery