ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಂಧೂರ ಲಕ್ಷ್ಮಣನ ಪಾತ್ರ ಮಾಡುತ್ತಿರೋದು ಗೊತ್ತಿರೋ ವಿಷಯವೇ. ಉಮಾಪತಿಯವರೇ ನಿರ್ಮಾಪಕ, ಸಿಂಧೂರ ಲಕ್ಷ್ಮಣನೆಂದೇ ಗುರುತಿಸಿಕೊಂಡಿದ್ದ ಸುಧೀರ್ ಅವರ ಪುತ್ರ ತರುಣ್ ಸುಧೀರ್ ನಿರ್ದೇಶಕ. ಆದರೆ, ಈ ಪಾತ್ರವನ್ನು ಕಿಶೋರ್ ಮಾಡಬೇಕಿತ್ತು ಎಂಬ ವಿಷಯ ಗೊತ್ತಾಗಿದೆ.
ಆಕ್ಚುಯಲಿ `ಶೂರ ಸಿಂಧೂರ ಲಕ್ಷ್ಮಣ' ಎಂಬ ಟೈಟಲ್ 2 ವರ್ಷದ ಹಿಂದೆ ರಿಜಿಸ್ಟರ್ ಆಗಿತ್ತು. ರಾಧಾಕೃಷ್ಣ ಪಲ್ಲಕ್ಕಿ ಡೈರೆಕ್ಟರ್. ಸಿಂಧೂರ ಲಕ್ಷ್ಮಣನ ಪಾತ್ರಕ್ಕೆ ಕಿಶೋರ್ ಅವರನ್ನೂ ಆಯ್ಕೆ ಮಾಡಿದ್ದರು. ಆದರೀಗ ಅವರೇ ತಮ್ಮ ಕಥೆ, ರಿಸರ್ಚ್ ಡೀಟೈಲ್ಸ್ ಎಲ್ಲವನ್ನೂ ಉಮಾಪತಿಯವರಿಗೆ ಕೊಟ್ಟಿದ್ದಾರಂತೆ. ದರ್ಶನ್ ಅವರು ಆ ಪಾತ್ರ ಮಾಡಿದರೆ, ಚಿತ್ರ ಇನ್ನಷ್ಟು ಹೆಚ್ಚು ಜನರಿಗೆ ರೀಚ್ ಆಗುತ್ತೆ. ಕಮರ್ಷಿಯಲ್ ಆಗಿಯೂ ಹಿಟ್ ಆಗುತ್ತೆ. ಈ ಸಿನಿಮಾ ಬಗ್ಗೆ ತರುಣ್ ಸುಧೀರ್ ಮತ್ತು ಉಮಾಪತಿ ನನ್ನ ಜೊತೆ ಚರ್ಚಿಸಿದರು. ಹಕ್ಕುಗಳನ್ನು ಅವರಿಗೆ ಕೊಟ್ಟಿದ್ದೇನೆ. ಕಿಶೋರ್ ಅವರಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ ರಾಧಾಕೃಷ್ಣ ಪಲ್ಲಕ್ಕಿ.
ಆ ಕಥೆಯ ಹಕ್ಕುಗಳು ಈಗ ಉಮಾಪತಿ ಅವರ ಬಳಿ ಇವೆ. ಈಗಿನ್ನೂ ಸ್ಕ್ರಿಪ್ಟ್ ಕೆಲಸ ಶುರುವಾಗಿದೆ. ದರ್ಶನ್ ಅವರು ಆಗಲೇ 2 ಚಿತ್ರ ಒಪ್ಪಿಕೊಂಡಿದ್ದಾರೆ. ಅವು ಮುಗಿದ ನಂತರವೇ ಈ ಸಿನಿಮಾ ಎಂದಿದ್ದಾರೆ ತರುಣ್ ಸುಧೀರ್. ಅಪ್ಪಿತಪ್ಪಿಯೂ ಚಿತ್ರದ ಟೈಟಲ್ ಬಗ್ಗೆಯೂ ಮಾತನಾಡಿಲ್ಲ.