ಡಾರ್ಲಿಂಗ್ ಕೃಷ್ಣ ಮತ್ತು ಮೈನಾ ನಾಗಶೇಖರ್ ಜೋಡಿಯ ಹೊಸ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ಹೀರೋಯಿನ್ ಎಂಬ ಸುದ್ದಿಗೆ ಈಗ ಫುಲ್ ಸ್ಟಾಪ್ ಬಿದ್ದಿದೆ. ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರೋದು ಭಾವನಾ ಮೆನನ್. ಜಾಕಿ ಭಾವನಾ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ.
ಶ್ರೀಕೃಷ್ಣ@ಜಿಮೇಯ್ಲ್.ಕಾಮ್ ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ತಯಾರಾಗುತ್ತಿದೆ. ಚಿತ್ರದಲ್ಲಿ ವಿವಾಹೇತರ ಸಂಬಂಧ, ಲಿವಿಂಗ್ ಟುಗೆದರ್ನಂತಾ ಸಬ್ಜೆಕ್ಟ್ ಇದೆ. ಸೀರಿಯಸ್ ಸಬ್ಜೆಕ್ಟ್ ಆಗಿದ್ದರೂ, ಚಿತ್ರವನ್ನು ಹ್ಯೂಮರಸ್ ಆಗಿ ತೋರಿಸಲಿದ್ದೇವೆ. ಪಾತ್ರಕ್ಕೆ ಸ್ವಲ್ಪ ಮೆಚ್ಯೂರ್ಡ್ ಎನಿಸುವ ನಟಿ ಬೇಕಿತ್ತು. ರಾಧಿಕಾ ಮತ್ತು ಭಾವನಾ ಇಬ್ಬರೂ ಮನಸ್ಸಿನಲ್ಲಿದ್ದರು. ರಾಧಿಕಾ ಅವರ ಡೇಟ್ಸ್ ಸಮಸ್ಯೆಯಿಂದಾಗಿ ಭಾವನಾ ಅವರನ್ನು ಆಯ್ಕೆ ಮಾಡಿಕೊಂಡೆವು ಎಂದಿದ್ದಾರೆ ನಾಗಶೇಖರ್.
ಇಡೀ ಚಿತ್ರದಲ್ಲಿ ಕೇವಲ 6 ಕಲಾವಿದರು ಮಾತ್ರ ಇರಲಿದ್ದಾರೆ. ಸೆಪ್ಟೆಂಬರ್ 1ರಿಂದ ಮೊದಲ ಹಂತದ ಶೂಟಿಂಗ್ ಶುರುವಾಗಲಿದೆ. ಇದೇ ವೇಳೆ ನಾಗಶೇಖರ್ ಲವ್ ಮಾಕ್ಟೇಲ್ ಚಿತ್ರದ ತೆಲುಗು ರೀಮೇಕ್ನ್ನೂ ಶೂಟಿಂಗ್ ಮಾಡಲಿದ್ದಾರೆ.
ಚಿತ್ರದ ನಾಯಕ ಒಬ್ಬ ಫ್ಲರ್ಟ್. ತುಂಟ ಹುಡುಗ. ಅಷ್ಟೇ ಸೆನ್ಸಿಟಿವ್. ಕಥೆಯ ಒನ್ಲೈನ್ ಇಷ್ಟವಾಯ್ತು. ಭಾವನಾ ಜೊತೆ ನಟಿಸೋಕೆ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ ಡಾರ್ಲಿಂಗ್ ಕೃಷ್ಣ.