Print 
cm yediyurappa, cn yediyurappa,

User Rating: 0 / 5

Star inactiveStar inactiveStar inactiveStar inactiveStar inactive
 
cm bs yediyurappa tests positive for corona
BS Yediyurappa

ಕನ್ನಡ ಚಿತ್ರರಂಗಕ್ಕೆ ಕೊರೊನಾ ಕಾಡ್ತಿರೋದು ಹೊಸದೇನಲ್ಲ. ಆದರೆ, ಈ ಬಾರಿ ಬೇರೆಯದೇ ರೀತಿ ಕಾಡ್ತಾ ಇದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೊನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಹೀಗಾಗಿ ಯಡಿಯೂರಪ್ಪ ಮಣಿಪಾಲ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾರೆ. ಯಡಿಯೂರಪ್ಪ ಅವರಿಗೆ ಕೊರೊನಾದ ಯಾವುದೇ ಲಕ್ಷಣಗಳಿಲ್ಲ. ಬಿಪಿ, ಶುಗರ್ ಕೂಡಾ ನಾರ್ಮಲ್ ಇದೆ. ಆದರೂ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ ಯಡಿಯೂರಪ್ಪ. ದೇವೇಗೌಡ, ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಗಣ್ಯ ನಾಯಕರೆಲ್ಲ ಯಡಿಯೂರಪ್ಪ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಇತ್ತ ಚಿತ್ರರಂಗದ ಜೊತೆಗಿನ ಸಭೆಯೂ ಮುಂದೂಡಲ್ಪಟ್ಟಿದೆ. ನಾಳೆ ಅಂದರೆ ಮಂಗಳವಾರ ಶಿವರಾಜ್ ಕುಮಾರ್ ನೇತೃತ್ವದ ಚಿತ್ರರಂಗದ ನಿಯೋಗ ಸಿಎಂ ಅವರನ್ನು ಭೇಟಿ ಮಾಡಬೇಕಿತ್ತು. ಯಡಿಯೂರಪ್ಪ ಕ್ವಾರಂಟೈನ್ ಆದ ಹಿನ್ನೆಲೆಯಲ್ಲಿ ಸಭೆ ಮುಂದಕ್ಕೆ ಹೋಗಿದೆ. ಸದ್ಯದ ಮಟ್ಟಿಗೆ ಕನಿಷ್ಠ 20 ದಿನಗಳ ಕಾಲ ಸಿಎಂ ಜೊತೆ ಮೀಟಿಂಗ್ ಕಷ್ಟವಾಗಬಹುದು. ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕವೇ ನಿಯೋಗ ಮನವಿ ಸಲ್ಲಿಸುವ ಸಾಧ್ಯತೆಯೂ ಇದೆ.