` ನಮ್ದೇ ದಾರಿ.. ನಮ್ದೇ ಸವಾರಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yuvaratna poster sensation
Yuvaratna Movie Image

ಯುವರತ್ನ ಚಿತ್ರದ ವರಮಹಾಲಕ್ಷ್ಮಿ ಪೋಸ್ಟರ್ ರಿಲೀಸ್ ಆಗಿದೆ. ಅಪ್ಪು ಚಿತ್ರದ ಏನಾದರೂ ಅಪ್‍ಡೇಟ್ಸ್ ಸಿಗಬಹುದೇ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೇ ಮೃಷ್ಟಾನ್ನವಾಗಿದ್ದರೆ ಅಚ್ಚರಿಯಿಲ್ಲ. ಪೋಸ್ಟರ್ ಹಬ್ಬದೂಟ ಬಡಿಸಿರೋದಂತೂ ನಿಜ.

ಸ್ಟೈಲಿಷ್ ಆಗಿ ಡ್ಯಾನ್ಸಿಂಗ್ ಪೋಸ್‍ನಲ್ಲಿರೋ ಪುನೀತ್ ಲುಕ್‍ನಲ್ಲೇ ಗಮನ ಸೆಳೆಯುತ್ತಿದ್ದಾರೆ. ಜೊತೆಗೆ ಒಂದು ಕ್ಯಾಪ್ಷನ್ ಇದೆ. ನಾನ್ ಯಾವತ್ತೂ ಬೇರೆಯವರ ರೂಟ್‍ನಲ್ಲಿ ಟ್ರಾವೆಲ್ ಮಾಡಲ್ಲ. ನಮ್ದೇ ದಾರಿ.. ನಮ್ದೇ ಸವಾರಿ.. ಪಕ್ಕದಲ್ಲಿ ಫೆರಾರಿ ಹೋದ್ರೂ ತಲೆಕೆಡಿಸಿಕೊಳ್ಳಲ್ಲ..

ರಾಜಕುಮಾರದ ನಂತರ ಸಂತೋಷ್ ಆನಂದರಾಮ್, ವಿಜಯ್ ಕಿರಗಂದೂರು ಮತ್ತೊಮ್ಮೆ ಪುನೀತ್ ಜೊತೆ ಸೇರಿ ಮಾಡಿರೋ ಸಿನಿಮಾ ಯುವರತ್ನ. ಕೋವಿಡ್ 19 ಇಲ್ಲದೇ ಹೋಗಿದ್ದರೆ, ಚಿತ್ರ ರಿಲೀಸ್ ಆಗೋಕೆ ರೆಡಿಯಾಗಿರುತ್ತಿತ್ತೇನೋ.. ಸದ್ಯಕ್ಕಂತೂ ಈ ವರ್ಷ ಚಿತ್ರದ ಬಗ್ಗೆ ಯೋಚನೆ ಮಾಡುವಂತಿಲ್ಲ, ಹಾಗಿದೆ ಪರಿಸ್ಥಿತಿ.

ಪುನೀತ್ ಎದುರು ಸಯೇಷಾ ಸೈಗಲ್ ನಾಯಕಿಯಾಗಿದ್ದಾರೆ. ಉಳಿದಂತೆ ದೊಡ್ಡ ದೊಡ್ಡ ಕಲಾವಿದರ ಸೈನ್ಯವೇ ಚಿತ್ರದಲ್ಲಿದೆ. ಗೆಟ್ ರೆಡಿ. ಅವರೇ ಹೇಳ್ತಾವ್ರೆ.. ಅವರದ್ದೇ ದಾರಿ.. ಅವರದ್ದೇ ಸವಾರಿ.. ಬಂದಾಗಷ್ಟೇ ತಿಳ್ಕೋಬೇಕು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery