` ವೀರ ಸಿಂಧೂರ ಲಕ್ಷ್ಮಣ ಶುರು : ದರ್ಶನ್ ಗುಡ್ ನ್ಯೂಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan as sindhoora lakshmana
Darshan

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ಐತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಬಾರಿ ವೀರ ಸಿಂಧೂರ ಲಕ್ಷ್ಮಣನ ಪಾತ್ರ. ಹೌದೋ.. ಅಲ್ಲವೋ.. ಎಂಬ ಗುಸು ಗುಸು ಮಾತಿನಲ್ಲೇ ಇದ್ದ ಚಿತ್ರಕ್ಕೆ ಲಾಕ್ ಡೌನ್ ಸಮಯದಲ್ಲೇ ಚಾಲನೆ ಸಿಕ್ಕಿದೆ.

ಒನ್ಸ್ ಎಗೇಯ್ನ್ ಈ ಚಿತ್ರಕ್ಕೆ ಉಮಾಪತಿಯೇ ಪ್ರೊಡ್ಯೂಸರ್. ರಾಬರ್ಟ್ ಚಿತ್ರದ ನಂತರ ಐತಿಹಾಸಿಕ ಸಿಂಧೂರ ಲಕ್ಷ್ಮಣ ಚಿತ್ರಕ್ಕೂ ಉಮಾಪತಿಯೇ ನಿರ್ಮಾಪಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ತರುಣ್ ಸುಧೀರ್.

ಸಿಂಧೂರ ಲಕ್ಷ್ಮಣನ ಪಾತ್ರದ ಮೂಲಕ ದೊಡ್ಡ ಹೆಸರು ಮಾಡಿದ್ದರು ಕನ್ನಡದ ಖ್ಯಾತ ಖಳನಟ ಸುಧೀರ್. ಈಗ ಅವರ ಪುತ್ರನೇ ತಂದೆಗೆ ದೊಡ್ಡ ಹೆಸರು ಕೊಟ್ಟ ನಾಯಕನ ಕಥೆಯನ್ನು ಸಿನಿಮಾ ಮಾಡುತ್ತಿರುವುದು ವಿಶೇಷ.

ಅಂದಹಾಗೆ ಸಿಂಧೂರ ಲಕ್ಷ್ಮಣ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಆತನನ್ನು ಹಿಡಿಯಲಾಗದೆ ತಂತ್ರ ಮಾಡಿ ಒಬ್ಬಂಟಿಯಾಗಿ ಬರುವಂತೆ ಮಾಡುವ ಬ್ರಿಟಿಷರು, ನಿಶ್ಯಸ್ತ್ರನಾಗಿದ್ದ ಸಿಂಧೂರ ಲಕ್ಷ್ಮಣನನ್ನು ಕೊಲ್ಲುತ್ತಾರೆ. ಭಗತ್ ಸಿಂಗ್‍ನನ್ನು ನೇಣಿಗೇರಿಸುವ 10 ವರ್ಷ ಮೊದಲೇ ಬಲಿದಾನ ಮಾಡಿದ್ದ ಹೋರಾಟಗಾರ ಸಿಂಧೂರ ಲಕ್ಷ್ಮಣ. ಬಲಿದಾನ ಮಾಡಿದಾಗ ಸಿಂಧೂರ ಲಕ್ಷ್ಮಣನ ವಯಸ್ಸು ಕೇವಲ 24.

ಸಂಗೊಳ್ಳಿ ರಾಯಣ್ಣನಾಗಿ ಮಿಂಚು ಹರಿಸಿದ್ದ ದರ್ಶನ್, ಕುರುಕ್ಷೇತ್ರದಲ್ಲಿ ಐತಿಹಾಸಿಕ ಪಾತ್ರದಲ್ಲೂ ಕಾಣಿಸಿಕೊಂಡಿದ್ದರು. ಈಗಾಗಲೇ ಮದಕರಿ ನಾಯಕನ ಪಾತ್ರಕ್ಕೆ ಒಪ್ಪಿಕೊಂಡಿರೋ ದರ್ಶನ್, ಈಗ ಮತ್ತೊಂದು ಐತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ತರುಣ್ ಸುಧೀರ್ ಮನೆಯಲ್ಲಿ ಸ್ಕ್ರಿಪ್ಟ್ ಪೂಜೆ ನಡೆದಿದ್ದು, ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery