ಕನ್ನಡ ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರರಂಗದ ವಿವಿಧ ಸಂಘಟನೆಗಳು ಒಟ್ಟಿಗೇ ಸೇರಿ ಶಿವರಾಜ್ ಕುಮಾರ್ ಅವರನ್ನು ನೇತೃತ್ವ ವಹಿಸಿಕೊಳ್ಳಲು ಮನವಿ ಮಾಡಿದ್ದವು. ಈಗ ಶಿವಣ್ಣ ಕಾರ್ಯೋನ್ಮುಖರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಶಿವಣ್ಣ ಮನೆಯಲ್ಲಿ ಚಿತ್ರರಂಗದ ಸ್ಟಾರ್ ನಟರೆಲ್ಲ ಹಾಜರಿದ್ದರು.
ರವಿಚಂದ್ರನ್, ಪುನೀತ್, ಯಶ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ಉಪೇಂದ್ರ, ರಮೇಶ್ ಅರವಿಂದ್, ಗಣೇಶ್, ದುನಿಯಾ ವಿಜಯ್, ಪುಷ್ಕರ್ ಮಲ್ಲಿಕಾರ್ಜುನಯ್ಯ, ಜಯಣ್ಣ, ವಿಜಯ್ ಕಿರಗಂದೂರು ಸೇರಿದಂತೆ ಚಿತ್ರೋದ್ಯಮದ ನಟರು, ನಿರ್ಮಾಪಕರು ಹಾಜರಿದ್ದರು.
ಸಭೆಯಲ್ಲಿ ಪ್ರಮುಖವಾಗಿ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಯಾವ ರೀತಿ ನೆರವಾಗಬಹುದು ಎಂಬ ಬಗ್ಗೆ. ನಂತರ ಚಿತ್ರೋದ್ಯಮದ ಚಟುವಟಿಕೆಗಳನ್ನು ಪುನಾರಂಭಿಸುವ ಬಗ್ಗೆ. ಚಿತ್ರೋದ್ಯಮದ ಗಣ್ಯರೆಲ್ಲ ಸೇರಿದ್ದ ಸಭೆಗೆ ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ.ರವಿ ಕೂಡಾ ಆಗಮಿಸಿದದರು. ಎಲ್ಲರೊಂದಿಗೂ ಮಾತುಕತೆ ನಡೆಸಿದರು.
ಶಿವಣ್ಣ ನೇತೃತ್ವದ ತಂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ ಮಾಡಲಿದೆ. ಶಿವಣ್ಣ ಮನೆಯಲ್ಲಿ ನಡೆದ ಸಭೆಗೆ ಸುದೀಪ್ ಮತ್ತು ದರ್ಶನ್ ಗೈರು ಹಾಜರಾಗಿದ್ದರು. ಸುದೀಪ್, ಹೈದರಾಬಾದ್‍ನಲ್ಲಿ ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿದ್ದರೆ, ದರ್ಶನ್ ಅರಣ್ಯ ಇಲಾಖೆ ರಾಯಭಾರಿಯಾಗಿ ಬಂಡೀಪುರ ಕಾಡಿನಲ್ಲಿದ್ದಾರೆ.