ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ ಚೇತರಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ವಿಜಯಲಕ್ಷ್ಮಿ, ಈಗ ಗುಣಮುಖರಾಗುತ್ತಿದ್ದು, ಅಲ್ಲಿಂದಲೇ ಎರಡು ವಿಡಿಯೋ ಸಂದೇಶ ನೀಡಿದ್ದಾರೆ. ತಮಿಳುನಾಡಿನವರಿಗೆ ಒಂದು ವಿಡಿಯೋ, ಕನ್ನಡದವರಿಗೆ ಇನ್ನೊಂದು ವಿಡಿಯೋ.
ನಾನು ಬದುಕುತ್ತೇನೆ ಎಂದುಕೊಂಡಿರಲಿಲ್ಲ. ಬದುಕೋದು ಬೇಡ ಎಂದು ತೀರ್ಮಾನಿಸಿಬಿಟ್ಟಿದ್ದೆ. ಸೋಮವಾರದಿಂದ ತೀವ್ರತರವಾದ ಚಿಕಿತ್ಸೆ ನೀಡುತ್ತಿದ್ದಾರೆ. ನಾನು ಊಟ ಮಾಡಿಲ್ಲ. ಡ್ರಿಪ್ಸ್‍ನಲ್ಲೇ ಇದ್ದೇನೆ. ಒಬ್ಬ ಹೆಣ್ಣಾಗಿ ಏನೇನೆಲ್ಲ ಕೇಳಬಾರದೋ, ಎಲ್ಲವನ್ನೂ ಕೇಳಿದ್ದೇನೆ. ನರಕ ನೋಡಿ ಆಯ್ತು. ನಿಮ್ಮ ಮಗುವೊಂದು ಮತ್ತೆ ಹುಟ್ಟಿ ಬಂದಿದೆ ಎಂದುಕೊಳ್ಳಿ, ಆಶೀರ್ವಾದವಿರಲಿ' ಎಂದಿದ್ದಾರೆ ವಿಜಯಲಕ್ಷ್ಮಿ.
ತಮಿಳು ವಿಡಿಯೋದಲ್ಲಿ ನಟ ಸೀಮನ್ ವಿರುದ್ಧ ಕೆಂಡಕಾರಿದ್ದಾರೆ. ಇದನ್ನು ರಾಜಕೀಯಗೊಳಿಸಬೇಡಿ ಎಂದು ಮನವಿ ಮಾಡಿದ್ದಾರೆ.