ಬಿಗ್‍ಬಾಸ್ ಮೂಲಕ ಬೆಳಕಿಗೆ ಬಂದ ಕಿರುತೆರೆ ನಟಿ ಜಯಶ್ರೀ ಮೊಗದಲ್ಲೀಗ ಮಂದಹಾಸ ಮೂಡಿದೆ. ಆಗಿದ್ದು ಇಷ್ಟೆ, ಇತ್ತೀಚೆಗೆ ಜಯಶ್ರೀ ಪದೇ ಪದೇ ಆತ್ಮಹತ್ಯೆಯ ಮಾತನ್ನಾಡುತ್ತಿದ್ದರು. ನನಗೆ ದಯಾಮರಣ ಕೊಡಿಸಿ, ನಾನು ಸಾಯಬೇಕು ಎನ್ನುತ್ತಿದ್ದರು. ಕೌಟುಂಬಿಕ ಸಮಸ್ಯೆಗಳಿಂದ ಜರ್ಝರಿತವಾಗಿದ್ದ ಜಯಶ್ರೀ ಈಗ ಬದಲಾಗಿದ್ದಾರೆ. ಕಿಚ್ಚ ಸುದೀಪ್ ಆಡಿದ ಸ್ಫೂರ್ತಿಯ ಮಾತುಗಳು, ತುಂಬಿದ ಆತ್ಮವಿಶ್ವಾಸ ವರ್ಕೌಟ್ ಆಗಿದೆ. ಅದರ ಮೊದಲ ಹೆಜ್ಜೆಯೇನು ಗೊತ್ತೇ..?
ತಲೆಯನ್ನು ಪೂರ್ತಿ ಬಾಲ್ಡ್ ಮಾಡಿಕೊಂಡು ಮುಗುಳ್ನಗುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಹಾಗೆ ತಾವು ತೆಗೆದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿದ್ದಾರೆ ಜಯಶ್ರೀ.