ಕೊರೊನಾ ಬಂದ ಬೆನ್ನಲ್ಲೇ ಥರೇವಾರಿ ಮಾಸ್ಕ್‍ಗಳೂ ಮಾರುಕಟ್ಟೆಗೆ ಬಂದಿವೆ. ಆದರೆ, ದರ್ಶನ್ ಫ್ಯಾನ್ಸ್, ಅಭಿಮಾನದಲ್ಲಿ ತಾವು ಎಂದೆಂದೂ ಮುಂದೆ ಅನ್ನೋದನ್ನ ಮತ್ತೆ ಸಾಬೀತು ಮಾಡಿದ್ದಾರೆ. ಮಾರುಕಟ್ಟೆಯಲ್ಲೀಗ ರಾಬರ್ಟ್ ಮಾಸ್ಕ್‍ಗಳಿವೆ.
ಇದು ಅಭಿಮಾನಿಗಳದ್ದೇ ಐಡಿಯಾ. ರಾಬರ್ಟ್ ಚಿತ್ರದ ಕ್ರೇಜ್ ಹೇಗಿದೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲವೇನೋ. ಉಮಾಪತಿ, ತರುಣ್ ಸುಧೀರ್ ಮತ್ತು ದರ್ಶನ್ ಕಾಂಬಿನೇಷನ್ನಿನ ಚಿತ್ರ ರಾಬರ್ಟ್. ಚಿತ್ರೀಕರಣ, ಡಬ್ಬಿಂಗ್ ಎಲ್ಲವನ್ನೂ ಮುಗಿಸಿ ಸೆನ್ಸಾರ್ ಅಂಗಳಕ್ಕೇರಲು ಕಾಯುತ್ತಿರೋ ಚಿತ್ರಕ್ಕೆ ಸದ್ಯಕ್ಕೆ ಬ್ರೇಕ್ ಹಾಕಿರೋದು ಕೊರೊನಾ. ಕೊರೊನಾ ಹೋದ ಕೂಡ್ಲೇ ಥಿಯೇಟರುಗಳಲ್ಲಿರುತ್ತೆ. ಸದ್ಯಕ್ಕೆ ಅಭಿಮಾನಿಗಳು ತಮ್ಮ ಮಾಸ್ಕ್‍ನಲ್ಲಿ ರಾಬರ್ಟ್‍ನನ್ನು ಅರೆಸ್ಟ್ ಮಾಡಿದ್ದಾರೆ.