` ಕತ್ತಲಲ್ಲಿ ಕಳ್ಳನಂತೆ.. ಬೇಟೆಯಾಡೋ ಬಿಲ್ಲನಂತೆ.. ಬಂದ ಬಂದ ಫ್ಯಾಂಟಮ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
phantom image
sudeep in phantom movie

ಕತ್ತಲಲ್ಲಿ ಕಳ್ಳನಂತೆ.. ಬೇಟೆಯಾಡೋ ಬಿಲ್ಲನಂತೆ.. ರಾತ್ರಿ ಕುದುರೆ ಬೆನ್ನ ಏರಿ.. ಬೀಸೊ ಗಾಳಿ ಜೊತೆಗೆ ಸೇರಿ.. ಇದು ಸಿಂಪಲ್ ಸುನಿ ಬರಹ. ಫ್ಯಾಂಟಮ್ ಚಿತ್ರದ ಪುಟ್ಟ ವಿಡಿಯೋಗೆ ಸುನಿ ಕೊಟ್ಟಿರೋ ಬರಹವಿದು. ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಸ್ಟಾರ್ ನಟರೊಬ್ಬರ ಚಿತ್ರವೊಂದು ಶೂಟಿಂಗ್‍ನಲ್ಲಿ ಬ್ಯುಸಿಯಾಗಿದೆ. ಇಡೀ ಇಂಡಿಯಾದಲ್ಲಿಯೇ ಚಿತ್ರೀಕರಣ ಶುರು ಮಾಡಿದ ಮೊದಲ ಸ್ಟಾರ್ ಸುದೀಪ್.

you_tube_chitraloka1.gif

ಫ್ಯಾಂಟಮ್ ಚಿತ್ರ ತಂಡ ಸಿನಿಮಾದ ಒಂದು ರಾ ಫುಟೇಜ್ ರಿಲೀಸ್ ಮಾಡಿದೆ. ಬೈಕ್ ಇಳಿದು ಕತ್ತಲಲ್ಲಿಯೇ ಬೇಟೆಗೆ ಹೊರಡುವ ಕಿಚ್ಚನ ಸೀನ್ ಥ್ರಿಲ್ ಕೊಡೋದಂತೂ ಪಕ್ಕಾ.