` ನರಕಕ್ ಇಳ್ಸಿ.. ನಾಲಗೆ ಸೀಳ್ಸಿ.. ಪವರ್ ಸ್ಟಾರ್ ಹಾಡು ಕೇಳಿದ್ರಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth rajkumar image
puneeth rajkumar

ನರಕಕ್ ಇಳ್ಸಿ.. ನಾಲ್ಗೆ ಸೀಳ್ಸಿ.. ಬಾಯ್ ಒಲಿಸಾಕಿದ್ರೂನೆ.. ಮೂಗ್ನಲ್ ಕನ್ನಡ್ ಪದವಾಡ್ತೀನಿ.. ನನ್ನ ಮನಸ್ಸನ್ ನೀನ್ ಕಾಣೆ.. ಹೆಂಡ್‍ಗುಡುಕ ರತ್ನನ ಪದವಿದು. ಜಿ.ಪಿ.ರಾಜರತ್ನಂ ಅವರು ಸೃಷ್ಟಿಸಿದ ಹೆಂಡ್‍ಗುಡುಕ ರತ್ನನನ್ನು ಅವನ ಕನ್ನಡಕ್ಕಾಗಿಯೇ ಸ್ಮರಿಸುತ್ತಾರೆ ಕನ್ನಡಿಗರು. ಆ ಹಾಡು ನೆನಪಿಸುವ ಹಾಡೊಂದನ್ನು ಪವರ್ ಸ್ಟಾರ್ ಪುನೀತ್ ಹಾಡಿದ್ದಾರೆ. ಫ್ರೆಂಚ್ ಬಿರಿಯಾನಿ ಚಿತ್ರಕ್ಕಾಗಿ.

ವಾಸುಕಿ ವೈಭವ್ ಸಂಗೀತ ನೀಡಿರುವ ಹಾಡಿಗೆ ಅದೇ ಜೋಷ್‍ನಲ್ಲಿ ಶಕ್ತಿ ತುಂಬಿದ್ದಾರೆ ಪುನೀತ್. ಇದು ಪುನೀತ್ ಅವರದ್ದೇ ನಿರ್ಮಾಣದ ಚಿತ್ರ. ರತ್ನನ ಹಾಡುಗಳನ್ನು ಯಥಾವತ್ ಬಳಸಿಕೊಂಡಿಲ್ಲ. ವಾಸುಕಿ ವೈಭವ್ ಮತ್ತು ಅಭಿಷೇಕ್ ಸಾಹಿತ್ಯವೂ ಇದೆ. ಏನ್ ಮಾಡೋದು ಸ್ವಾಮಿ ಹಾಡಿನಲ್ಲಿ ಚೂರೇ ಚೂರು ರತ್ನನ ಪದ ಬಳಸಿಕೊಂಡಿದ್ದಾರೆ.

ಪನ್ನಗಾಭರಣ ನಿರ್ದೇಶನದ ಫ್ರೆಂಚ್ ಬಿರಿಯಾನಿ, ಒಟಿಟಿಯಲ್ಲಿಯೇ ನೇರವಾಗಿ ರಿಲೀಸ್ ಆಗುತ್ತಿರುವ 2ನೇ ಕನ್ನಡ ಚಿತ್ರ. ಡ್ಯಾನಿಷ್ ಸೇಟ್ ಪ್ರಧಾನ ಪಾತ್ರದಲ್ಲಿರುವ ಚಿತ್ರದಲ್ಲಿ ಕಾಮಿಡಿ ಥ್ರಿಲ್ಲರ್ ಕಥೆಯಿದೆ.