` ಫ್ಯಾಂಟಮ್ ಫಸ್ಟ್ ಲುಕ್ ಬಿಡುಗಡೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
phantom image
sudeep image from phantom movie

ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಸುದೀಪ್ ಅವರಂತೂ ಬಹಳ ದಿನಗಳ ನಂತರ ಬಣ್ಣ ಹಚ್ಚಿದ ಖುಷಿ ಹಂಚಿಕೊಂಡಿದ್ದಾರೆ. ಸಹಜವೇ.. ಬಣ್ಣ ಹಾಗೂ ಬಣ್ಣಗಳ ನಡುವಲ್ಲೇ ಉಸಿರಾಡುವವರಿಗೆ ಮೇಕಪ್ ಇಲ್ಲದೆ ಬದುಕುವುದು ಕಷ್ಟ. ಈಗ ಸುದೀಪ್ ಮತ್ತೆ ಬಣ್ಣ ಹಚ್ಚಿದ್ದಾರೆ.

ವಿಕ್ರಾಂತ್ ರೋಣ ಪಾತ್ರ ಕಾಡಿನ ಮಧ್ಯೆ ಇರುವ ನದಿಯಲ್ಲಿ ದೋಣಿಯಲ್ಲಿ ಹೋಗುವ ದೃಶ್ಯವೇ ಚಿತ್ರದ ಫಸ್ಟ್ ಲುಕ್. ಹಿನ್ನೆಲೆಯಲ್ಲಿ ಗುಮ್ಮ ಬಂದ ಗುಮ್ಮ ಅನ್ನೋ ಧ್ವನಿ ಕೇಳುತ್ತಿದೆ. ಹಾಗಂತ ಇದು ಟೀಸರ್. ಮತ್ತೆ ಚಿತ್ರೀಕರಣ ಶುರುವಾದ ಖುಷಿ ಹಂಚಿಕೊಳ್ಳೋ ಪ್ರಯತ್ನ ಎಂದಿದ್ದಾರೆ ಸುದೀಪ್.

ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರಕ್ಕೆ ಜಾಕ್ ಮಂಜು ನಿರ್ಮಾಪಕ. ಹೈದರಾಬಾದ್‍ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಹೈದರಾಬಾದ್‍ನ ಚಿತ್ರೀಕರಣಕ್ಕೆ ಬೆಂಗಳೂರಿನಿಂದಲೇ ಕಾರ್ಮಿಕರನ್ನೂ ಕರೆದುಕೊಂಡು ಹೋಗಿದ್ದಾರೆ ಜಾಕ್ ಮಂಜು.