` ಅಟ್ಲಾಂಟಾ ಸಿನಿಮೋತ್ಸವಕ್ಕೆ ಅಮೃತಮತಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
amruthamathi selected for atlanta film festival
Amruthamathi Movie Image

ಬರಗೂರು ರಾಮಚಂದ್ರಪ್ಪ ನಿರ್ದೇಶನದ ಹರಿಪ್ರಿಯಾ ನಟಿಸಿರುವ ಚಿತ್ರ ಅಮೃತಮತಿ. 13ನೇ ಶತಮಾನದ ಕನ್ನಡದ ಜನ್ನನ ಕೃತಿ ಯಶೋಧರ ಚರಿತವನ್ನು ಸಿನಿಮಾ ಮಾಡಿದ್ದಾರೆ ಬರಗೂರು. ಸೌಂದರ್ಯ, ಐಶ್ವರ್ಯ, ಪ್ರೀತಿಸುವ ಗಂಡ, ಅಕ್ಕರೆಯ ಅತ್ತೆ, ಮಾವ ಎಲ್ಲವೂ ಇದ್ದ ಮಹಾರಾಣಿ ಅಮೃತಮತಿ, ತನ್ನ ಘನತೆಯನ್ನೂ ಮರೆತು ಅಷ್ಟಾವಂಕನ ಪ್ರೇಮದ ಬಲೆಯಲ್ಲಿ ಬೀಳುವ ಕಥೆ ಅದು.

ಈಗಾಗಲೇ ಅಮೃತಮತಿ ಚಿತ್ರ ನೋಯ್ಡಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿಯನ್ನೂ ಗೆದ್ದಿತ್ತು. ಈಗ ಕೆನಡಾದ ಅಟ್ಲಾಂಟಾ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ನಿರ್ಮಾಣದ ಚಿತ್ರವಿದು.

ಅಮೃತಮತಿಯಾಗಿ ಹರಿಪ್ರಿಯಾ, ಯಶೋಧರ ರಾಜನಾಗಿ ಕಿಶೋರ್ ಹಾಗೂ ಅಷ್ಟಾವಂಕನಾಗಿ ತಿಲಕ್ ನಟಿಸಿದ್ದಾರೆ. ಸುಂದರ್ ರಾಜ್, ಪ್ರಮೀಳಾ ಜೋಷಾಯ್, ಸುಪ್ರಿಯಾ ರಾವ್, ವತ್ಸಲಾ ಮೋಹನ್ ಮೊದಲಾದವರು ನಟಿಸಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery